ಚಿಕ್ಕಬಳ್ಳಾಪುರ : ಲಂಚ ಪಡೆಯುವಾಗ ರೆಡ್‌ ಹ್ಯಾಂಡ್ ಆಗಿ ಲೋಕ ಬಲೆಗೆ ಬಿದ್ದ ಕೃಷಿ ಅಧಿಕಾರಿ

ಲೋಕಾಯುಕ್ತ ಅಧಿಕಾರಿಗಳು ಪರಿಶೀಲಿಸುತ್ತಿರುವುದು.
ಲೋಕಾಯುಕ್ತ ಅಧಿಕಾರಿಗಳು ಪರಿಶೀಲಿಸುತ್ತಿರುವುದು.
ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ :

ಗುತ್ತಿಗೆದಾರನ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕೃಷಿ ಅಧಿಕಾರಿ, ಲಂಚ ಸ್ವೀಕರಿಸುವ ವೇಳೆಯೇ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಕೃಷಿ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಅಧಿಕಾರಿ ಲೋಕಾ ಬಲೆಗೆ ಬಿದ್ದಿದ್ದಾರೆ.

ಚಿಕ್ಕಬಳ್ಳಾಪುರ ಕೃಷಿ ಜಂಟಿ ನಿರ್ದೇಶಕರ ಕಚೇರಿಯಲ್ಲಿ ನಿನ್ನೆ ಲೋಕಾಯುಕ್ತ ಎಸ್ ಪಿ ಆಂಟೋನಿ ಜಾನ್ ನೇತೃತ್ವದಲ್ಲಿ ಅಧಿಕಾರಿಗಳು ರೇಡ್‌ ನಡೆಸಿದರು. ದಾಳಿ ವೇಳೆಯೇ ಸಹಾಯಕ ಕೃಷಿ ಅಧಿಕಾರಿ ಶಂಕರಯ್ಯ ಎಂಬುವರು ಗುತ್ತಿಗೆದಾರನ ಬಳಿ 2 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ರೆಡ್‌ ಹ್ಯಾಂಡ್‌ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ, ಅಲ್ಲದೇ ಈ ಹಿಂದೆ ಶಂಕರಯ್ಯ ಗುತ್ತಿಗೆದಾರ ಮಂಜುನಾಥ ಬಳಿ 2 ಲಕ್ಷ ಹಣವನ್ನು ಮುಂಗಡವಾಗಿ ಪಡೆದಿದ್ದಾರೆ. ಲೋಕಾಯುಕ್ತ ದಾಳಿಯ ವೇಳೆ ಅಧಿಕಾರಿಯ ಬ್ಯಾಗ್‌ ಚೆಕ್‌ ಮಾಡಿದಾಗ ಕಂತೆ ಕಂತೆ ಹಣ ಪತ್ತೆಯಾಗಿದೆ.

ಇನ್ನು ಕೃಷಿ ಅಧಿಕಾರಿ ಶಂಕರಯ್ಯ ಬ್ಯಾಗ್‌ ನಲ್ಲಿ ಒಟ್ಟು ಹದಿಮೂರು ಲಕ್ಷದ ಮೂರು ಸಾವಿರ ಹಣ ಪತ್ತೆಯಾಗಿದೆ. ಅಧಿಕಾರಿಗಳು ಹಣವನ್ನು ಎಣಿಸಲು ಮಿಷನ್ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಸದ್ಯ ಲೋಕಾಯುಕ್ತ ಅಧಿಕಾರಿಗಳು ಕೃಷಿ ಅಧಿಕಾರಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.   

Author:

share
No Reviews