ಚಾಮರಾಜನಗರ:
ಕಾಡಾನೆ ದಾಳಿಗೆ ಆದಿವಾಸಿ ಗಿರಿಜನದ ವ್ಯಕ್ತಿಯೋರ್ವ ಬಲಿಯಾಗಿರುವಂತಹ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಆಡಿನಕಣಿವೆ ಬಳಿ ನಡೆದಿದೆ.
ತಮಿಳುನಾಡು ಮೂಲದ 42 ವರ್ಷದ ಕರಿಯನ್ (42) ಎಂಬುವವರು ಕಾಡಾನೆ ದಾಳಿಯಿಂದ ಸಾವನ್ನಪ್ಪಿದ್ದಾರೆ, ಕರಿಯನ್ ಎಂಬುವರು ಕೆಲಸ ಮುಗಿಸಿಕೊಂಡು ಮತ್ತೀಬ್ಬರ ಜೊತೆ ಮುಖ್ಯ ರಸ್ತೆಯಿಂದ ಆಡಿನಕಣಿವೆ ಕಡೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಾಡಾನೆಯು ಏಕಾಏಕಿ ಅಟ್ಟಾಡಿಸಿಕೊಂಡು ಬಂದಿದೆ. ಕಾಡಾನೆಯು ಕರಿಯನ್ ಅನ್ನು ಅಟ್ಟಾಡಿಸಿ ತುಳಿದು ಸಾಯಿಸಿದೆ. ಇನ್ನು ಆತನ ಜೊತೆಯಿಂದ ಮತ್ತಿಬ್ಬರು ಸದ್ಯ ಕಾಡಾನೆ ದಾಳಿಯಿಂದ ಪಾರಾಗಿದ್ದಾರೆ.
ಈ ಕುರಿತು ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.