ನವದೆಹಲಿ:
ಈ ಬಾರಿ ಕೇಂದ್ರ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಸಿಹಿ ಸುದ್ದಿ ಕೊಡಲು ಸಿದ್ದವಾಗಿದ್ದು, ಕೇಂದ್ರ ಬಜೆಟ್ ನಲ್ಲಿ ಅನೇಕ ಔಷಧ ಪದಾರ್ಥಗಳ ಮೇಲಿನ ಆಮದು ಸುಂಕ ಕಡಿತ ಮಾಡಲಾಗಿದೆ. ಔಷಧಗಳ ಗರಿಷ್ಠ ದರ ಕಡಿಮೆ ಮಾಡಬೇಕೆಂದು ಉತ್ಪಾದಕ ಮತ್ತು ಮಾರ್ಕೆಟಿಂಗ್ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಈ ಬಗ್ಗೆ ಕೇಂದ್ರ ಸರ್ಕಾರದಿಂದ ಸುತ್ತೋಲೆ ಹೊರಡಿಸಲಾಗಿದೆ. ಹಾಗೂ ರಾಷ್ಟ್ರೀಯ ಔಷಧ ದರ ಪ್ರಾಧಿಕಾರ ಸಹ ಸುತ್ತೋಲೆಯನ್ನು ಹೊರಡಿಸಿದೆ. ಇನ್ನು ಔಷಧ ಕಂಪನಿಗಳು ಪರಿಷೃತ ಬೆಲೆ ಪಟ್ಟಿಯಲ್ಲಿ ಯಾವ್ಯಾವ ಔಷಧಗಳ ಬೆಲೆಗಳಲ್ಲಿ ಬದಲಾವಣೆಯಾಗಿದೆ ಎಂಬುದನ್ನು ಗುರುತಿಸಿ ಆ ಪಟ್ಟಿಯನ್ನು ಡೀಲರ್ ಗಳು, ರಾಜ್ಯ ಔಷಧ ಪ್ರಾಧಿಕಾರಗಳು ಸರ್ಕಾರಿ ಪ್ರಾಧಿಕಾರಿಗಳಿಗೆ ಕಳುಹಿಸಬೇಕು ಎಂದು ಎನ್ಪಿಪಿಎ ತಿಳಿಸಿದೆ.
2025-2026 ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ 36 ಜೀವ ರಕ್ಷಕ ಔಷಧಗಳಿಗೆ ಆಮದು ಸುಂಕದಿಂದ ವಿನಾಯಿತಿ ನೀಡಲಾಗಿದೆ. ಶ್ವಾಸಕೋಶ ಕ್ಯಾನ್ಸರ್ ಗೆ ಬಳಸುವ ಹಾಗೂ ಅಸ್ತಮಾ ಚಿಕಿತ್ಸೆಗೆ ಬಳಸುವ 36 ಔಷಧಗಳ ಮೇಲಿನ ಸುಂಕ ರದ್ದುಗೊಳಿಸಲಾಗಿದೆ.