EDUCATION :
ಕೇಂದ್ರ ಪ್ರೌಢಶಿಕ್ಷಣ ಮಂಡಳಿಯು [ CBSE ]ತನ್ನ 2025ನೇ ಸಾಲಿನ 12ನೇ ತರಗತಿಯ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು cbseresults.nic.in ವೆಬ್‌ಸೈಟ್‌ನಲ್ಲಿ ಅಥವಾ DigiLocker ಪ್ಲಾಟ್‌ಫಾರ್ಮ್‌ನಲ್ಲಿ ಪರಿಶೀಲಿಸಬಹುದು.
ಈ ಬಾರಿ 2025ನೇ ಸಾಲಿನಲ್ಲಿ, 16 ಲಕ್ಷ 92 ಸಾವಿರ 794 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ 14 ಲಕ್ಷ 96 ಸಾವಿರ 307 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶಾಲಾ ಶಿಕ್ಷಣದಲ್ಲಿ ಹುಡುಗಿಯರು ಮತ್ತೆ ಒಮ್ಮೆ ಮೇಲುಗೈ ಸಾಧಿಸಿದ್ದಾರೆ. ಈ ಬಾರಿ ಶೇಕಡಾ 91% ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದು, ಹುಡುಗರ ಉತ್ತೀರ್ಣ ಪ್ರಮಾಣ 88.39% ಆಗಿದೆ.
CBSE ಪರೀಕ್ಷೆಗಳು ಫೆಬ್ರವರಿ 15ರಿಂದ ಏಪ್ರಿಲ್ 4ರ ವರೆಗೆ ದೇಶದಾದ್ಯಂತ ನಡೆದಿದ್ದವು. ಈ ಬಾರಿ ಒಟ್ಟು ಪಾಸ್ ಪ್ರಮಾಣ ಶೇಕಡಾ 87.96% ಆಗಿದ್ದು, ಕಳೆದ ಬಾರಿಗಿಂತ 0.41% ಹೆಚ್ಚು ಯಶಸ್ಸು ದಾಖಲಿಸಲಾಗಿದೆ. ಇಡೀ ದೇಶದೊಳಗೆ ವಿಜಯವಾಡ ಕ್ಷೇತ್ರವು ಶೇಕಡಾ 99.60% ಫಲಿತಾಂಶದೊಂದಿಗೆ ಮೊದಲ ಸ್ಥಾನಕ್ಕೆ ಏರಿದೆ. ಇತ್ತ ಪ್ರಯಾಗ್ರಾಜ್ ಶೇಕಡಾ 79.53% ಫಲಿತಾಂಶದಿಂದ ಕೊನೆಯ ಸ್ಥಾನದಲ್ಲಿದೆ. ನಮ್ಮ ಬೆಂಗಳೂರು ನಗರವೂ ತನ್ನ ಶೈಕ್ಷಣಿಕ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದು, 95.95% ಫಲಿತಾಂಶದೊಂದಿಗೆ ರಾಷ್ಟ್ರ ಮಟ್ಟದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿದೆ.