ಬೆಂಗಳೂರು: ಬೆಳ್ಳಿತೆರೆಗೆ ಕಾಲಿಡಲು ಸಜ್ಜಾದ ಬಿಗ್ ಬಾಸ್ ಖ್ಯಾತಿಯ ಬ್ರೋ ಗೌಡ ಶಮಂತ್

" ಜೊಂಬಿ" ಪೋಸ್ಟರ್​
" ಜೊಂಬಿ" ಪೋಸ್ಟರ್​
ಕನ್ನಡ

ಬೆಂಗಳೂರು: ಲಕ್ಷ್ಮೀ ಬಾರಮ್ಮ ಸೀರಿಯಲ್‌ ಹೀರೋ ಆಗಿ ಕಾಣಿಸಿಕೊಂಡಿರೋ ಶಮಂತ್‌ ಬ್ರೋ ಗೌಡ ಇದೀಗ ಸ್ಯಾಂಡಲ್‌ವುಡ್‌ಗೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಲಕ್ಷ್ಮೀ ಬಾರಮ್ಮ ಸೀರಿಯಲ್‌ ಖ್ಯಾತಿಯ ಶಮಂತ್‌ ಬ್ರೋ ಗೌಡ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ತಮ್ಮ ಅಭಿನಯದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿರುವ ಬ್ರೋ ಗೌಡ ಕಿರುತೆರೆಯಿಂದ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಲು ರೆಡಿಯಾಗಿದ್ದಾರೆ.

ರಾಘು ಮತ್ತು ಚೆಫ್ ಚಿದಂಬರ ಚಿತ್ರಗಳ ನಿರ್ದೇಶಕ ಆನಂದ್ ರಾಜ್ ಇದೀಗ ತಮ್ಮ ಮೂರನೇ ಸಾಹಸದೊಂದಿಗೆ ́ಜೊಂಬಿ ́ಚಿತ್ರ ಮಾಡುವ ಬಹುನಿರೀಕ್ಷಿತ ಕನಸಿಗೆ ಕೊನೆಗೂ ಜೀವ ತುಂಬುತ್ತಿದ್ದಾರೆ. ಕನ್ನಡದ ಮೊಟ್ಟಮೊದಲ ಜೊಂಬಿ ಚಲನಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಗೇಮ್ ಚೇಂಜರ್ ಆಗಲಿದೆ ಎನ್ನಲಾಗಿದೆ.ಈ ಚಿತ್ರದಲ್ಲಿ ಶಮಂತ್‌ ಹೀರೋ ಆಗಿ ಕಾಣಿಸಿಕೊಳ್ಳಲ್ಲಿದ್ದಾರೆ.ಮಕರ ಸಂಕ್ರಾಂತಿ ಹಬ್ಬದ ದಿನವೇ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈ ಖುಷಿ ಸುದ್ದಿಯನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟರ್​ ನೋಡಿ ಫ್ಯಾನ್ಸ್​ ಶಮಂತ್​ ಅವರ ಮುಂದಿನ ಸಿನಿ ಜರ್ನಿಗೆ ಶುಭ ಹಾರೈಸಿದ್ದಾರೆ.

ಈ ಚಿತ್ರದಲ್ಲಿ ಹೈ-ಲೆವೆಲ್ ಆಕ್ಷನ್ ಸೀನ್‌ಗಳು ಇರಲಿದ್ದು ,ಹಾಲಿವುಡ್‌ ಸಿನಿಮಾಗಳಲ್ಲಿ ಇರುವಂತಹ ಆಕ್ಷನ್ ಅನ್ನು ಈ ಸಿನಿಮಾದಲ್ಲಿ ನೋಡಬಹುದಾಗಿದೆ. ಈಗಾಗಲೇ ಟೀಸರ್ ಶೂಟಿಂಗ್ ಮುಗಿದಿದ್ದು, ಸಿನಿಮಾದ ಚಿತ್ರೀಕರಣವು ಏಪ್ರಿಲ್‌ನಿಂದ ಆರಂಭವಾಗಲಿದೆ. ಕೊಡಗು, ಚಿಕ್ಕಮಂಗಳೂರು ಸುತ್ತಮುತ್ತ ಅದರಲ್ಲೂ ಮುಖ್ಯವಾಗಿ, ಕಾಡುಗಳಲ್ಲಿ ಹೆಚ್ಚು ಶೂಟಿಂಗ್ ಇರಲಿದೆ. ಸದ್ಯಕ್ಕೆ ಟೈಟಲ್ ಇನ್ನೂ ಫೈನಲ್ ಆಗಿಲ್ಲ. ಶಮಂತ್ ಅವರನ್ನು ಹೊರತುಪಡಿಸಿ, ಮಿಕ್ಕ ಕಲಾವಿದರನ್ನು ಫೈನಲ್ ಮಾಡಬೇಕಿದೆ ಎಂದಿದ್ದಾರೆ ಆನಂದ್ ರಾಜ್.

Author:

...
Editor

ManyaSoft Admin

Ads in Post
share
No Reviews