Breaking News : ಭೀಕರ ಅಪಘಾತ | ಸ್ಥಳದಲ್ಲೇ ಐವರ ದಾರುಣ ಸಾವು..!

ಅಪಘಾತದಲ್ಲಿ ಬಸ್‌ ನಜ್ಜು ಗುಜ್ಜಾಗಿರುವುದು.
ಅಪಘಾತದಲ್ಲಿ ಬಸ್‌ ನಜ್ಜು ಗುಜ್ಜಾಗಿರುವುದು.
ರಾಜ್ಯ

ಚಲಿಸುತ್ತಿದ್ದ ಎರಡು ಬೈಕ್‌ ಗಳಿಗೆ ಕೆಕೆಆರ್‌ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಐವರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಆದೋನಿ ತಾಲೂಕಿನ ಪಾಂಡವಗಲ ಗ್ರಾಮದ ಬಳಿ ನಡೆದಿದೆ.

ರಾಯಚೂರು ಜಿಲ್ಲೆಯ ಮಾನ್ವಿ ಮೂಲದ ಹೇಮಾದ್ರಿ (55) ಅವರ ಪತ್ನಿ ನಾಗರತ್ನಮ್ಮ (44), ಪುತ್ರ ದೇವರಾಜು (24), ಹಾಗೂ ಆದೋನಿ ತಾಲೂಕಿನ ಕುಪ್ಪಗಲು ಗ್ರಾಮದ ಈರಣ್ಣ (40) ಈತನ ಪತ್ನಿ ಆದಿ ಲಕ್ಷ್ಮಿ (30) ಮೃತ ದುರ್ದೈವಿಗಳಾಗಿದ್ದಾರೆ. ಗಂಗಾವತಿಯಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಕೆಕೆ ಆರ್‌ ಟಿಸಿ ಬಸ್ ಮಾನ್ವಿಯಿಂದ ಆದೋನಿ ಗ್ರಾಮಕ್ಕೆ ಹಾಗೂ ಕುಪ್ಪಗಲ್ಲು ಗ್ರಾಮದ ಕಡೆ ಹೋಗುತ್ತಿದ್ದ ಎರಡು ಬೈಕ್‌ ಗಳಿಗೆ ಚಾಲಕನ ನಿಯತ್ರಣ ತಪ್ಪಿ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲಿಯೇ ಬೈಕ್‌ ನಲ್ಲಿದ್ದ ಐವರು ಸಾವನ್ನಪ್ಪಿದ್ದಾರೆ. ಇನ್ನ ಬಸ್‌ ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅಪಘಾತ ಸಂಭವಿಸುತ್ತಿದ್ದಂತಯೇ ಬಸ್‌ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ವಿಷಯ ತಿಳಿದು ಘಟನಾ ಸ್ಥಳಕ್ಕೆ ಆದೋನಿ ಪೊಲೀಸರು ಹಾಗೂ ಕೆಕೆಆರ್‌ಟಿಸಿ ರಾಯಚೂರು ಘಟಕದ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಚಂದ್ರಶೇಖರ ಭೇಟಿ ನೀಡಿ ಪರಿಶೀಲಿಸಿದ್ದಾರೆ, ಮೃತದೇಹಗಳನ್ನು ಆದೋನಿ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

 

 

 

 

Author:

...
Editor

ManyaSoft Admin

Ads in Post
share
No Reviews