ಗುಬ್ಬಿ : ಕಲ್ಲೂರು ಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಗುಬ್ಬಿ :

ಗುಬ್ಬಿ ತಾಲೂಕಿನ ಕಡಬಾ ಹೋಬಳಿಯ ಕಲ್ಲೂರು ಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ದೇಹ ತೇಲುತ್ತಿದ್ದು, ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಕೆರೆಯಲ್ಲಿ ಶವ ತೇಲುತ್ತಿರೋದನ್ನು ಕಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಕತ್ತಲೆಯಲ್ಲೇ ಸ್ಥಳೀಯರ ನೆರವಿನಿಂದ ಶವವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಮೃತದೇಹದ ಮುಖ ಕೊಳೆತು ಹೋಗಿದ್ದರಿಂದ ಗುರುತು ಪತ್ತೆಯಾಗಿಲ್ಲ. ಇನ್ನು ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಗುಬ್ಬಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.

ಸುಮಾರು 55 ವರ್ಷದ ವ್ಯಕ್ತಿಯನ್ನು ಯಾರೋ ಕೊಲೆಗೈದು ಶವವನ್ನು ಕೆರೆಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಇಲ್ಲವೇ ವ್ಯಕ್ತಿ ಆತ್ಮಹತ್ಯೆ. ಮಾಡಿಕೊಂಡಿರಬಹುದು ಎಂಬ ಅನುಮಾನ ಮೂಡ್ತಿದೆ.

ಇನ್ನು ಮೃತವ್ಯಕ್ತಿ ಕೈಯಲ್ಲಿ ವಾಚ್ ಸೇರಿದಂತೆ ಮೊಬೈಲ್ ಪತ್ತೆಯಾಗಿದೆ. ಸಿ.ಎಸ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ತನಿಖೆ ಮುಂದುವರೆಸಿದ್ದಾರೆ. ಇನ್ನು ಕೆರೆಯಲ್ಲಿ ರೀತಿಯ ಅಪರಿಚಿತ ಶವವನ್ನು ಕಂಡು ಕಲ್ಲೂರು ಹಾಗೂ ಸುತ್ತಮುತ್ತಲ ಹಳ್ಳಿಯ ಜನರು ಒಬ್ಬಂಟಿಗರಾಗಿ ಓಡಾಡಲು ಹೆದರುವಂತಾಗಿದೆ.

Author:

share
No Reviews