ಪಾವಗಡ ಸೋಲಾರ್ ಪಾರ್ಕ್ ನಲ್ಲಿ ಬಂಡೆ ಬ್ಲಾಸ್ಟ್ ಮಾಡುತ್ತಿರುವುದು.ತುಮಕೂರು
ಪಾವಗಡ:
ಪಾವಗಡ ತಾಲೂಕು ತಿರುಮಣಿ ಹೋಬಳಿಯ ಬಳಿ ನಿರ್ಮಾಣವಾಗುತ್ತಿದ್ದ ಸೋಲಾರ್ ಪಾರ್ಕ್ ನಲ್ಲಿ ಬ್ಲ್ಯಾಸ್ ಸಂಭವಿಸಿದ್ದು, ಓರ್ವ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೋರ್ವ ಕಾರ್ಮಿಕ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ರಾಯಚೂರು ಮೂಲದ ಬಸವರಾಜು ಮೃತ ದುರ್ದೈವಿಯಾಗಿದ್ದಾನೆ. ಘಟನೆಯಲ್ಲಿ ಅಚ್ಚಮನಹಳ್ಳಿಯ ಶಿವಯ್ಯಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ತಿರುಮಣಿ ಬಳಿ KSPDCL ನಿಂದ ಸುಮಾರು 1002 ಎಕರೆ ಪ್ರದೇಶವನ್ನು ಸೋಲಾರ್ ಪಾರ್ಕ್ ನಿರ್ಮಾಣಕ್ಕೆ JSW ಕಂಪನಿಗೆ ನೀಡಲಾಗಿತ್ತು. ಹೀಗಾಗಿ ಸೋಲಾರ್ ಪಾರ್ಕ್ ನಿರ್ಮಾಣಕ್ಕಾಗಿ ಬಂಡೆ ಬ್ಲಾಸ್ಟ್ ಮಾಡುತ್ತಿದ್ದ ವೇಳೆ ಸ್ಫೋಟಕ ಸಿಡಿದಿದೆ. ಸ್ಪೋಟದ ತೀವ್ರತೆ ಹೆಚ್ಚಾಗಿದ್ದರಿಂದ ಅಕ್ಕ ಪಕ್ಕದ ಜಾಗದಲ್ಲಿ ಹಾಗೂ ಬೆಟ್ಡಕ್ಕೂ ಬೆಂಕಿ ವ್ಯಾಪಿಸಿದೆ. ಸ್ಫೋಟದ ಶಬ್ದದಿಂದ ಬೆಚ್ಚಿ ಬಿದ್ದ ಜನರು ದುರಂತ ಸ್ಥಳಕ್ಕೆ ದೌಡಾಯಿಸಿದರು. ಅದರೆ ಪೊಲೀಸರು ಸ್ಥಳೀಯರನ್ನು ತಡೆದಿದ್ದಾರೆ.
ಇನ್ನು ಬಂಡೆ ಸ್ಪೋಟಕ್ಕೆ ಕೆಲ ನಿಯಮಗಳಿದ್ದರೂ ಕೂಡ, ಅಕ್ರಮವಾಗಿ ಸ್ಪೋಟಕ ವಸ್ತುಗಳನ್ನು ಇಟ್ಟು ಬ್ಲ್ಯಾಸ್ಟ್ ಮಾಡಿದ್ದು ದುರಂತಕ್ಕೆ ಕಾರಣವಾಗಿದೆ ಎಂದು ಶಂಕಿಸಲಾಗುತ್ತಿದೆ. ಸದ್ಯ ಘಟನಾ ಸ್ಥಳಕ್ಕೆ KSPSCL AEE ಮಹೇಶ್ , ಗ್ರಾಮಾಂತರ ಸಿಪಿಐ ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅದೇನೆ ಇರಲಿ, ತುಮಕೂರು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಲ್ಲು ಗಣಿಕಾರಿಕೆಯಲ್ಲಿ ಸಾವು- ನೋವು ಸಂಭವಿಸುತ್ತಿದ್ದು, ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.