ಬಿಗ್‌ಬಾಸ್‌ನಲ್ಲಿ ಭಾಗವಹಿಸಿ ಫೇಮಸ್ ಆಗಿದ್ದ ರಜತ್, ಬಿಗ್‌ಬಾಸ್‌ನಿಂದ ಹೊರಬಂದ ಬಳಿಕ ಸಂಕಷ್ಟ ತಪ್ಪುತ್ತಿಲ್ಲ. ಬಿಗ್ ಬಾಸ್‌ನಿಂದ ಹೊರ ಬಂದ ಬಳಿಕ ಮಚ್ಚು ತೋರಿಸಿ ರೀಲ್ಸ್ ಮಾಡಿ, ತಮ್ಮ ಇನ್‌ಸ್ಟಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಈ ವಿಡಿಯೋ ಫುಲ್ ವೈರಲ್ ಆಗ್ತಿದ್ದಂತೆ ಬಿಗ್‌ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ಕಿಶನ್‌ನನ್ನು ಪೊಲೀಸರು ಅರೆಸ್ಟ್ ಮಾಡಿದ್ರು. ಕೆಲದ ದಿನಗಳ ಬಳಿಕ ಜಾಮೀನಿನ ಮೇಲೆ ಹೊರ ಬಂದಿದ್ರು. ಆದ್ರೀಗ ಕೋರ್ಟ್‌ಗೆ ಹಾಜರಾಗದ ಹಿನ್ನೆಲೆ ಮತ್ತೆ ರಜತ್‌ನನ್ನು ಪೊಲೀಸರು ಬಂಧಿಸಿದ್ದು, ವಿನಯ್ ಗೌಡಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಬಿಗ್‌ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಮಚ್ಚು ಬೀಸಿ ರೀಲ್ಸ್ ಮಾಡಿ ಹರಿಬಿಟ್ಟಿದ್ದರು. ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಇಬ್ಬರನ್ನು ಅರೆಸ್ಟ್ ಮಾಡಿದ್ರು. ಅಲ್ದೇ ರೀಲ್ಸ್‌ಗೆ ಬಳಕೆ ಮಾಡಿದ್ದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ನೀಡುವಂತೆ ಪೊಲೀಸರು ಸೂಚನೆ ನೀಡಿದ್ರು. ಆದ್ರೆ ಪೊಲೀಸರಿಗೆ ರಬ್ಬರ್ ಮುಚ್ಚು ನೀಡಿದ್ರು. ರೀಲ್ಸ್‌ಗೆ ಬಳಕೆ ಮಾಡಿದ್ದ ಮಚ್ಚನ್ನು ರಜತ್ ಎಸೆದಿದ್ದರು ಎಂದು ಒಪ್ಪಿಕೊಂಡಿದ್ರು. ಈವರೆಗೂ ಮಾರಕಾಸ್ತ್ರಗಳನ್ನು ಪೊಲೀಸರ ವಶಕ್ಕೆ ರಜತ್ ನೀಡಿರಲಿಲ್ಲ. ಜೊತೆಗೆ ರಜತ್‌ಗೆ ಷರತ್ತು ಬದ್ಧ ಜಾಮೀನು ನೀಡಿದ್ದು ನಿಗಧಿತ ಕಾಲದಲ್ಲಿ ಕೋರ್ಟ್‌ಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ಆದ್ರೆ ಈವರೆಗೂ ಕೋರ್ಟ್ಗೆ ಹಾಜರಾಗದ ಹಿನ್ನೆಲೆ ಸಾಕ್ಷಿನಾಶ ಎಂದು ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದು, ರಜತ್ ವಿರುದ್ಧ ಕೋರ್ಟ್ ನಾನ್ ಬೆಲ್ ವಾರೆಂಟ್ ಹೊರಡಿಸಿ ಬಂಧಿಸಲು ಆದೇಶ ನೀಡಿತ್ತು. ಕೋರ್ಟ್ ಆದೇಶದಂತೆ ರಜತ್‌ನನ್ನು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಲಾಗಿದೆ.
ನಮ್ಮ ಸ್ಯಾಂಡಲ್‌ವುಡ್‌ಗೆ ಅದೇನ್ ಆಗಿದ್ಯೋ ಏನೋ ನಮ್ಮ ಸಿನಿ ಮಂದಿ ಸದಾ ಒಂದಲ್ಲಾ ಒಂದು ವಿವಾದ ಸೃಷ್ಟಿ ಮಾಡಿಕೊಂಡು ಸುದ್ದಿಯಾಗ್ತಿದ್ದಾರೆ, ರೀಲ್ಸ್ ಹುಚ್ಚಾಟಕ್ಕೆ ಪುಂಡರು ಅರೆಸ್ಟ್ ಆಗೋದನ್ನೋ ನೋಡಿದ್ದೇವೆ ಆದ್ರೆ ನಟರು, ಬಿಗ್ ಬಾಸ್ ಮಾಜಿ ಸ್ಪರ್ಧಿಗಳು ಬಂಧನವಾಗ್ತಿದ್ದು ಅವರ ಭವಿಷ್ಯವನ್ನು ಅವರೇ ಹಾಳು ಮಾಡಿಕೊಳ್ತಿದ್ದಾರೆ.