ರಾಮನಗರ : ಬಿಡದಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ | ಬಾಲಕಿಗೆ ರೈಲು ಡಿಕ್ಕಿ ಹೊಡೆದು ಸಾವು

ರಾಮನಗರ : ರಾಮನಗರ ಜಿಲ್ಲೆ, ಬಿಡದಿಯ ಹೋಬಳಿ ವ್ಯಾಪ್ತಿಯ ಭದ್ರಾಪುರ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಖುಷಿ ಸಾವಿಗೀಡಾದ ಪ್ರಕರಣವನ್ನು ಹತ್ಯೆ ಎಂದು ಶಂಕಿಸಲಾಗಿತ್ತು. ಬಾಲಕಿಯ ಕುಟುಂಬದವರು ಹತ್ಯೆ ಆರೋಪ ಮಾಡಿದ್ದು, ಪೊಲೀಸರು ಕೂಡ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಬಾಲಕಿಯ 32 ಬಗೆಯ ಮಾದರಿಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ಎಫ್‌ಎಸ್‌ಎಲ್ ವರದಿಯ ಪ್ರಕಾರ ಬಾಲಕಿಯ ಮೇಲೆ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ದೃಢಪಟ್ಟಿದೆ.

ಇದೀಗ ಬಾಲಕಿಯ ಮರಣೋತ್ತರ ಪರೀಕ್ಷೆಯ ವರದಿ ಕೂಡ ಪೊಲೀಸರು ಪಡೆದಿದ್ದು, ತಲೆಗೆ ತೀವ್ರ ಪೆಟ್ಟಾದ ಪರಿಣಾಮವಾಗಿ ಬಾಲಕಿ ಮೃತಪಟ್ಟಿದ್ದಾಳೆ ಎಂದು ಅದು ಸ್ಪಷ್ಟಪಡಿಸಿದೆ. ರೈಲು ಡಿಕ್ಕಿಯಾದಾಗ ತಲೆ ಭಾಗಕ್ಕೆ ಬಿದ್ದ ಗಾಯವೇ ಬಾಲಕಿಯ ಮರಣಕ್ಕೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ. ಅಷ್ಟೇ ಅಲ್ಲದೆ, ಈ ಘಟನೆಯು ನಿಜಕ್ಕೂ ಅಪಘಾತವಾಗಿದ್ದನ್ನು ದೃಢಪಡಿಸುವಂತೆ, ರೈಲು ಡಿಕ್ಕಿ ಹೊಡೆಯುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವುದು ಬೆಳಕಿಗೆ ಬಂದಿದೆ.

ಈ ಮೂಲಕ ಶಂಕಿತ ಹತ್ಯೆ ಪ್ರಕರಣ ಇದೀಗ ದುರ್ಘಟನೆಯಾಗಿ ಬದಲಾಗಿದೆ. ಬಿಡದಿ ಪೊಲೀಸರು ಇನ್ನೂ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದು, ಪ್ರಕರಣದ ಅಂತಿಮ ವರದಿ ಸದ್ಯದಲ್ಲೇ ಹೊರಬೀಳಲಿದೆ.

Author:

...
Keerthana J

Copy Editor

prajashakthi tv

share
No Reviews