IPL 2025 : RCB ವಿರುದ್ಧ ಸೋತ ಬೆನ್ನಲ್ಲೇ LSG ತಂಡಕ್ಕೆ ಬಿಗ್ ಶಾಕ್

CRICKET : ಐಪಿಎಲ್ 2025ರ 18ನೇ ಆವೃತ್ತಿಯು ಲಕ್ನೋ ಸೂಪರ್ ಜೈಂಟ್ಸ್ ತಂಡದ ಪಾಲಿಗೆ ತೀವ್ರ ನಿರಾಶೆಯಿಂದ ಕೊನೆಗೊಂಡಿದೆ. ನೆನ್ನೆ ಲಕ್ನೋ ತಂಡ, ಏಕಾನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 6 ವಿಕೆಟ್‌ಗಳಿಂದ ಸೋಲು ಕಂಡಿದೆ. ಈ ಮೂಲಕ ಲಕ್ನೋ ತಂಡದ ಈ ಋತುವಿನ ಪ್ರಯಾಣ ಅಂತ್ಯವಾಗಿದೆ. ಇನ್ನು ಐಪಿಎಲ್ ಕಮಿಟಿಯಿಂದ ಲಕ್ನೋ ತಂಡಕ್ಕೆ ಮತ್ತೊಂದು ದೊಡ್ಡ ಶಾಕ್ ಲಭಿಸಿದೆ. ತಂಡದ ನಾಯಕ ರಿಷಭ್ ಪಂತ್ ಸೇರಿದಂತೆ, ಇಡೀ ತಂಡದ ಮೇಲೆ ಭಾರೀ ದಂಡವನ್ನು ವಿಧಿಸಲಾಗಿದೆ.

ಇನ್ನು ನೆನ್ನೆ ಪಂದ್ಯದಲ್ಲಿ ಲಕ್ನೋ ಬ್ಯಾಟಿಂಗ್ ಆರಂಭದಲ್ಲೇ ನಷ್ಟ ಅನುಭವಿಸಿತು. ಆದರೆ ಮಿಚೆಲ್ ಮಾರ್ಷ್ ಔಟಾದ ನಂತರ ಕ್ರೀಸ್‌ಗೆ ಬಂದ ನಾಯಕ ರಿಷಭ್ ಪಂತ್ ಭರ್ಜರಿ ಆಟವಾಡಿದರು. ಅವರು 61 ಎಸೆತಗಳಲ್ಲಿ 11 ಬೌಂಡರಿ ಮತ್ತು 8 ಸಿಕ್ಸರ್‌ಗಳ ಸಹಾಯದಿಂದ 118 ರನ್‌ಗಳು ಬಾರಿಸಿ, ತಂಡದ ಪರ ಅತಿದೊಡ್ಡ ಇನಿಂಗ್ಸ್ ನೀಡಿದರು. ಈ ಶತಕದ ಇನ್ನಿಂಗ್ಸ್ ಪಂದ್ಯವನ್ನು ತಿರುಗಿಸಬಹುದೆಂಬ ಭಾವನೆ ಮೂಡಿಸಿದರೂ, ಉಳಿದ ಬ್ಯಾಟರ್‌ಗಳ ಬೆಂಬಲದ ಕೊರತೆಯಿಂದಾಗಿ ತಂಡ 200 ಪ್ಲಸ್ ಸ್ಕೋರ್ ಹಾಕಿದರೂ ಗೆಲುವಿಗೆ ತಲುಪಲಿಲ್ಲ. RCB ತಂಡವು ಗುರಿಯನ್ನು ಅಲ್ಪ ಓವರ್‌ಗಳಲ್ಲೇ ಸಾಧಿಸಿ, ಲಕ್ನೋ ವಿರುದ್ಧ ಗೆಲುವು ದಾಖಲಿಸಿದೆ.

ನೆನ್ನೆ ಪಂದ್ಯದಲ್ಲಿ ನಡೆದ ಇನ್ನೊಂದು ಪ್ರಮುಖ ಘಟನೆಯೆಂದರೆ  ಲಕ್ನೋ ತಂಡ ನಿಧಾನ ಓವರ್ ದರ ಪ್ರಕರಣ. ಪಂದ್ಯದ ವೇಳೆ, ನಿಯಮಿತ ಸಮಯದಲ್ಲಿ ಓವರ್‌ಗಳನ್ನು ಪೂರ್ಣಗೊಳಿಸದ ಕಾರಣಕ್ಕೆ, ಐಪಿಎಲ್ ಕಮಿಟಿ ತಂಡದ ನಾಯಕ ರಿಷಭ್ ಪಂತ್‌ಗಿಂತ 30 ಲಕ್ಷ ರೂ ದಂಡವನ್ನೂ ವಿಧಿಸಿದೆ. ಇಷ್ಟಲ್ಲದೇ, ಪಂತ್ ಹೊರತುಪಡಿಸಿ ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ ತಂಡದ ಇತರ ಎಲ್ಲ ಆಟಗಾರರಿಗೂ 12 ಲಕ್ಷ ರೂ ಅಥವಾ ಪಂದ್ಯ ಶುಲ್ಕದ ಶೇಕಡಾ 50ರಷ್ಟು ದಂಡವನ್ನು ವಿಧಿಸಲಾಗಿದೆ. ಈ ಋತುವಿನಲ್ಲಿ ಲಕ್ನೋ ತಂಡವು ಇಂಥ ನಿಧಾನ ಓವರ್ ದರದ ಪ್ರಕರಣದಲ್ಲಿ ಮೂರನೇ ಬಾರಿಗೆ ಸಿಕ್ಕಿಬಿದ್ದಿರುವುದರಿಂದ, ದಂಡದ ಪ್ರಮಾಣ ಹೆಚ್ಚಾಗಿ ನಿರ್ಧರಿಸಲಾಗಿದೆ.

Author:

...
Keerthana J

Copy Editor

prajashakthi tv

share
No Reviews