ಬೀದರ್:
ಪ್ರೀತಿ ಮಾಯೆ.. ಹದಿಹರೆಯದವರನ್ನು ಸೆಳೆಯುತ್ತೆ… ಆದರೆ ಪ್ರೀತಿ ಕೆಲವರ ಬಾಳಲ್ಲಿ ಸುಂದರವಾದರೆ, ಮತ್ತೆ ಕೆಲವರ ಬಾಳಲ್ಲಿ ಕರಾಳವಾಗುತ್ತೆ. ಪ್ರೀತಿ ಎಂಬ ಪಾಶಕ್ಕೆ ಅದೆಷ್ಟೊ ಜೀವಗಳು ಕೂಡ ಬಲಿಯಾಗಿವೆ. ಅಲ್ಲದೇ ಅದೆಷ್ಟೋ ಕೊಲೆಗಳು ಕೂಡ ನಡೆದು ಹೋಗಿವೆ. ಹೌದು ಮಗಳು ಲವ್ ಮಾಡಿದ್ದಕ್ಕೆ ಮರ್ಯಾದೆಗೆ ಅಂಜಿ ಯುವತಿಯ ಪ್ರಾಣವನ್ನೇ ಪಾಪಿ ತಂದೆ ತೆಗೆದಿದ್ದಾನೆ.
ಹೌದು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬರಗೇನ ತಾಂಡಾದಲ್ಲಿ ಪಾಪಿ ತಂದೆಯೊಬ್ಬ ಮಗಳು ಪ್ರೀತಿ ಮಾಡಿದ್ದಾಳೆ ಎಂಬ ಒಂದೇ ಕಾರಣಕ್ಕೆ ಮಗಳ ಉಸಿರನ್ನೇ ನಿಲ್ಲಿಸಿದ್ದಾನೆ. ಮೋತಿರಾಮ ಜಾಧವ್ ಅವರ ಮಗಳು ಮೋನಿಕಾ ಯುವಕನೋರ್ವನನ್ನು ಪ್ರೀತಿ ಮಾಡ್ತಿದ್ದಳು. ನಮ್ಮ ಮನೆ ಮರ್ಯಾದೆ ಹೋಗುತ್ತೆ ನೀನು ಪ್ರೀತಿ- ಪ್ರೇಮದಿಂದ ದೂರ ಇರು, ನಿನಗೆ ಒಳ್ಳೆಯ ಹುಡುಗನನ್ನು ನೋಡಿ ಮದುವೆ ಮಾಡುತ್ತೇನೆ ಅಂತಾ ಮಗಳಿಗೆ ಅನೇಕ ಬಾರಿ ತಂದೆ ಬುದ್ದಿ ಹೇಳಿದ್ದರು.
ಅಪ್ಪನ ಬುದ್ದಿ ಮಾತು ಕೇಳದ ಮೋನಿಕಾ ಯುವಕನನ್ನು ಪ್ರೀತಿ ಮಾಡ್ತಾನೆ ಇದ್ದಳು, ಅಲ್ಲದೇ ಪ್ರೀತಿಸಿದ ಯುವಕನನ್ನೇ ಮದುವೆ ಆಗುತ್ತೇನೆ ಎಂದಿದ್ದಾಳೆ, ಮಗಳ ಮಾತನ್ನು ಕೇಳಿದ ಅಪ್ಪ ಮೋತಿರಾಮ್ ಕೆರಳಿ, ಮನೆಯಲ್ಲಿ ಯಾರು ಇಲ್ಲದ ವೇಳೆ ಮಗಳ ಕುತ್ತಿಗೆಗೆ ಹಗ್ಗ ಬಿಗಿದಿದ್ದಾನೆ. ಅಲ್ಲದೇ ಕಟ್ಟಿಗೆಯಿಂದ ಮನಬಂದಂತೆ ಹಲ್ಲೆ ಮಾಡಿದ್ದಾನೆ, ಹಲ್ಲೆಯಲ್ಲಿ ತೀವ್ರವಾಗಿ ರಕ್ತಸ್ರಾವಗೊಂಡ ಯುವತಿ ಸ್ಥಳದಲ್ಲೇ ಉಸಿರು ನಿಲ್ಲಿಸಿದ್ದಾಳೆ. ಈ ಬಗ್ಗೆ ಸಂತಪೂರ ಪೊಲೀಸ್ ಠಾಣೆಗೆ ಮೃತಳ ತಾಯಿ ದೂರು ನೀಡಿದ್ದು, ಪಾಪಿ ತಂದೆಯನ್ನು ಬಂಧಿಸಿದ್ದಾರೆ.