BUEATY TIPS:
ಬೇಸಿಗೆಯಲ್ಲಿ ದಾಹವನ್ನು ತೀರಿಸಲು ಕಲ್ಲಂಗಡಿ ಹಣ್ಣನ್ನು ಹೆಚ್ಚಿನವರು ಮನೆಗೆ ತರುತ್ತಾರೆ. ಇದು ದೇಹವನ್ನು ಹೈಡ್ರೇಟ್ ಮಾಡುವ ಜೊತೆಗೆ ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಕಲ್ಲಂಗಡಿಯಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳಂತಹ ಪೋಷಕಾಂಶಗಳಿವೆ, ಇದು ಆರೋಗ್ಯ ಹಾಗೂ ಚರ್ಮಕ್ಕೆ ಹೆಚ್ಚು ಪ್ರಯೋಜನ ಕಾರಿಯಾಗಿದೆ. ಕಲ್ಲಂಗಡಿ ಹಣ್ಣು ದೇಹವನ್ನು ತಂಪಾಗಿಸುವ ಗುಣ ಹೊಂದಿದ್ದು, ದೇಹದಲ್ಲಿ ನೀರಿನಂಶವನ್ನು ಕಾಪಾಡುತ್ತದೆ.
ಬೇಸಿಗೆಯ ರಾಣಿ ಎಂದೇ ಕರೆಯಲ್ಪಡುವ ಕಲ್ಲಂಗಡಿ, ತಂಪು ಮತ್ತು ತಾಜಾ ಗಾಳಿಯೊಂದಿಗೆ ನಮ್ಮ ದೇಹವನ್ನು ಉರಿಯುವ ಬಿಸಿಲಿನಿಂದ ರಕ್ಷಿಸುತ್ತದೆ. ಕಲ್ಲಂಗಡಿ ಹಣ್ಣಿನ ರಸವನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆ, ಸುಕ್ಕು ಮತ್ತು ಕಲೆಗಳನ್ನು ಕಡಿಮೆ ಮಾಡಬಹುದಾಗಿದೆ.
ಕಲ್ಲಂಗಡಿಯಲ್ಲಿ ಸುಮಾರು 92% ನೀರಿನ ಅಂಶವಿದೆ. ಇದರ ಜೊತೆಗೆ ವಿಟಮಿನ್ A, B6, ಹಾಗೂ C ಇವೆ. ಈ ಸಂಕಲನ ಚರ್ಮವನ್ನು ತಂಪುಗೊಳಿಸುತ್ತದೆ, ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಮೊಡವೆಗಳಿಂದ ರಕ್ಷಿಸುತ್ತದೆ. ಕಲ್ಲಂಗಡಿ ರಸದಲ್ಲಿ ನೈಸರ್ಗಿಕ ಎಂಟಿಆಕ್ಸಿಡೆಂಟ್ಗಳಿರುವುದರಿಂದ ಚರ್ಮ ಹಿಗ್ಗಿದಂತೆ ಕಾಣುವುದು ಸಹ ಕಡಿಮೆಯಾಗಬಹುದು.
ಕಲ್ಲಂಗಡಿಯನ್ನು ಮಿಕ್ಸ್ ಚಾರಿಗೆ ಹಾಕಿ ರಸವಾಗಿ ತಯಾರಿಸಿ. ನಂತರ ಅದನ್ನು ಸ್ವಚ್ಚವಾದ ಕಾಟನ್ ಸಹಾಯದಿಂದ ಮುಖಕ್ಕೆ ಹಚ್ಚಿ, 15 ನಿಮಿಷ ಬಿಟ್ಟು ತಣ್ಣನೆಯ ನೀರಿನಿಂದ ತೊಳೆಯಿರಿ. ವಾರದಲ್ಲಿ ಮೂರು ಬಾರಿ ಮಾಡಿದರೆ ಉತ್ತಮ ಫಲಿತಾಂಶ ಕಾಣಬಹುದು.