ಬೆಂಗಳೂರು :
ಹತ್ತು ವರ್ಷದ ಬಳಿಕ ಜಾತಿವಾರು ಸಾಮಾಜಿಕ ಮತ್ತು ಶೈಕ್ಷಣಿಕ ಆರ್ಥಿಕ ಸಮೀಕ್ಷೆಯ ಅಂತಿಮ ವರದಿ ಸಿದ್ದವಾಗಿದೆ. ತೀವ್ರ ವಿರೋಧದ ನಡುವೆಯೂ ಕೂಡ ಸಚಿವ ಸಂಪುಟ ಸಭೆಯಲ್ಲಿ ಶುಕ್ರವಾರ ಬಿಲ್ ಮಂಡನೆಯಾಗಿದೆ. ಬರೋಬ್ಬರಿ 50 ಸಂಪುಟಗಳುಳ್ಳ ವರದಿಯನ್ನು ಸಚಿವರೆಲ್ಲರಿಗೂ ವಿವರಿಸಲಾಗಿದೆ. ಇದರ ಬಗ್ಗೆ ವಿಷೇಶ ಸಚಿವ ಸಂಪುಟ ಸಭೆಯನ್ನ ಕರೆದಿದ್ದು ಏಪ್ರಿಲ್ 17ರಂದು ವಿಸ್ತೃತವಾಗಿ ಚರ್ಚಿಸಲು ತೀರ್ಮಾನಿಸಿದ್ದಾರೆ. ಸಂಪುಟ ಸದಸ್ಯರೇ ಈ ಹಿಂದೆ ಜಾತಿಗಣತಿಯನ್ನು ವಿರೋಧಿಸಿದ್ದರಿಂದ ಮುಂದೆ ಏನಾಗಲಿದೆ ಎಂಬ ಕುತೂಹಲದಲ್ಲಿ ಎಲ್ಲರ ದೃಷ್ಠಿ ಮುಂದಿನ ಸಚಿವ ಸಂಪುಟದ ಕಡೆಗಿದೆ.
ಈ ಸಮೀಕ್ಷೆಯನ್ನು ಮಾಡಲು ಸರ್ಕಾರದಿಂದ ಸರಿಸುಮಾರು 192 ಕೋಟಿ ರೂ ಹಣವನ್ನು ಬಿಡುಗಡೆ ಮಾಡಲಾಗಿತ್ತು. ಇದ್ರಲ್ಲಿ 165 ಕೋಟಿ ವೆಚ್ಚ ಮಾಡಲಾಗಿದೆ ಹೌದು, ಆಯೋಗ ರಚನೆಯಾದ 10 ವರ್ಷಗಳ ನಂತರ ಅಂತಿಮ ವರದಿಯನ್ನು 2024ರ ಫೆಬ್ರವರಿಯಲ್ಲಿ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗ್ಡೆ ಸರ್ಕಾರಕ್ಕೆ ಎರಡು ಮೂಟೆಗಳಲ್ಲಿ ವರದಿಯನ್ನು ಸಲ್ಲಿಸಿದ್ರು.
ಈ ಹಿಂದೆ ಮೊದಲ ಹಂತದ ವರದಿ ಸಲ್ಲಿಕೆಯಾದ ನಂತರ ವೀರಶೈವ, ಲಿಂಗಾಯತ ಹಾಗೂ ಒಕ್ಕಲಿಗ ಸಮದಾಯಗಳು ಇದು ವೈಜ್ಞಾನಿಕವಾಗಿಲ್ಲ. ಮನೆ ಮನೆಗೆ ಹೋಗಿ ಸಮೀಕ್ಷೆ ನಡೆಸಿಲ್ಲ, ಜೊತೆಗೆ ಮೂಲ ವರದಿಯಲ್ಲಿ ಆಯೋಗದ ಅಧ್ಯಕ್ಷರ, ಸದಸ್ಯರ ಸಹಿ ಇಲ್ಲ ಎಂದು ಸ್ವಪಕ್ಷೀಯ ಶಾಸಕರೇ ಆಕ್ಷೇಪವನ್ನ ವ್ಯಕ್ತಪಡಿಸಿದರು.
ಇನ್ನು ವರದಿಯಲ್ಲಿರುವ ಜಾತಿವಾರು ಜನಸಂಖ್ಯೆಯನ್ನು ನೋಡೋದಾದ್ರೆ
- ಪರಿಶಿಷ್ಠ ಜಾತಿ 1.08 ಕೋಟಿ
- ಪರಿಶಿಷ್ಠ ಪಂಗಡ 40.45 ಲಕ್ಷ
- ಮುಸ್ಲಿಂಮರು 70 ಲಕ್ಷ
- ಲಿಂಗಾಯತ 65 ಲಕ್ಷ
- ಒಕ್ಕಲಿಗ 60 ಲಕ್ಷ
- ಕುರುಬರು 45 ಲಕ್ಷ
- ಇತರೆ ಹಿಂದುಳಿದ ವರ್ಗ 91 ಲಕ್ಷ
- ಬ್ರಾಹ್ಮಣ 14 ಲಕ್ಷ
ಈ ವರದಿಯನ್ನು ನೀಡಿ ಕರ್ನಾಟಕದಲ್ಲಿ ಶೇ 94.17 ರಷ್ಟು ಜನರನ್ನು ಭೇಟಿ ಮಾಡಿದ್ದೇವೆ ಎಂಬ ವರದಿಯನ್ನು ನೀಡಿ ಒಟ್ಟು 37 ಲಕ್ಷ ಜನರು ಈ ಸಮೀಕ್ಷೆಯಲ್ಲಿ ಭಾಗಿಯಗಿಲ್ಲ ಎಂಬುದನ್ನು ಸಹ ಉಲ್ಲೇಖಿಸಿದ್ದಾರೆ. ಇನ್ನು ಈ ಜಾತಿ ಗಣತಿಯ ಪರ ವಿರೋಧಗಳು ಹಲವು ದಿನಗಳಿಂದ ಚರ್ಚೆ ಆಗುತ್ತಲೇ ಇವೆ. ಇವುಗಳಿಗೆಲ್ಲ ಹೇಗೆ ತೀರ್ಮಾನ ಮಾಡುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.