ಬೆಂಗಳೂರು:
ಖಾಸಗಿ ಕಂಪನಿಯ ಕಿರುಕುಳಕ್ಕೆ ಬೇಸತ್ತು ಉದ್ಯೋಗಿಯೋರ್ವ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ಬೆಂಗಳೂರಿನ ಜೆಪಿ ನಗರ 7ನೇ ಹಂತದ ಪುಟ್ಟೇನಹಳ್ಳಿ ಬಳಿ ನಡೆದಿದೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಂದೀಶ್ ಎಂಬುವವರು ಆತ್ಮಹತ್ಯೆಗೆ ಯತ್ನಿಸಿದವರಾಗಿದ್ದಾರೆ. ಕಂಪನಿಯು ಕಳೆದ ಒಂದು ತಿಂಗಳಿನಿಂದ ಸಂಬಳ ಕೊಡದೇ ಕಿರುಕುಳ ನೀಡುತ್ತಿದ್ದು ಮಾತ್ರವಲ್ಲದೇ ಇವರನ್ನು ಜೆಪಿ ನಗರದಿಂದ ದೇವನಹಳ್ಳಿಗೆ ವರ್ಗಾವಣೆ ಮಾಡಿದ್ದರು, ಈ ಸಂಬಂಧ ನಂದೀಶ್ ಹಾಗೂ ಕಂಪನಿ ಮೇಲಾಧಿಕಾರಿಗಳ ನಡುವೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಹೀಗಾಗಿ ಮನನೊಂದ ನಂದೀಶ್ ಕಟ್ಟಡದಿಂದ ಜಿಗಿದು ಆತ್ಮಹತ್ಯಗೆ ಯತ್ನಿಸಿದ್ದಾರೆ.
ಈ ವೇಳೆ ಕಟ್ಟಡದಿಂದ ಜಿಗಿದ ಪರಿಣಾಮ ನಂದೀಶ್ ಅವರಿಗೆ ಬೆನ್ನು ಮೂಳೆ ಮುರಿದಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರ ಸ್ಥಿತಿ ಗಂಭೀರವಾಗಿದೆ.