ಸಕ್ಕರೆಗೆ ಹೋಲಿಸಿದರೆ ಬೆಲ್ಲ ಆರೋಗ್ಯಕರ ಎಂದು ಹಲವರು ಹೇಳುತ್ತಾರೆ.ಬೆಲ್ಲದಲ್ಲಿ ನೈಸರ್ಗಿಕ ಖನಿಜಾಂಶ ಗಳು ಮತ್ತು ವಿಟಮಿನ್ ಅಂಶಗಳು ಇರುತ್ತವೆ. ಹೀಗಾಗಿ ಸಂಸ್ಕರಿಸಿದ ಸಕ್ಕರೆಗೆ ಹೋಲಿಸಿದರೆ ಬೆಲ್ಲ ತುಂಬಾ ಒಳ್ಳೆಯದು. ಜೊತೆಗೆ ಇದರಲ್ಲಿ ನಮ್ಮ ದೇಹಕ್ಕೆ ಅವಶ್ಯಕವಾಗಿ ಬೇಕಾದ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಶಿಯಮ್ ಕೂಡ ಇರುತ್ತದೆ. ಬೆಲ್ಲ ಇದೆಲ್ಲದರ ಕಾರಣದಿಂದ ನಮಗೆ ದೇಹಕ್ಕೆ ಹೆಚ್ಚು ಶಕ್ತಿ ಮತ್ತು ಚೈತನ್ಯ ಕೊಡುತ್ತದೆ. ನಿಯಮಿತ ಪ್ರಮಾಣದಲ್ಲಿ ಪ್ರತಿದಿನ ಬೆಲ್ಲವನ್ನು ಸೇವನೆ ಮಾಡುತ್ತಾ ಹೋದರೆ ದೇಹಕ್ಕೆ ಉತ್ತಮ ಕ್ಯಾಲೋರಿಗಳು ಮತ್ತು ಕಾರ್ಬೋಹೈಡ್ರೇಟ್ಸ್ ಅಂಶಗಳು ಸಿಗುತ್ತವೆ.
*ಬೆಲ್ಲದಲ್ಲಿ ಆಂಟಿ ಆಕ್ಸಿಡೆಂಟ್ ಪ್ರಮಾಣಗಳು ಹೇರಳವಾಗಿ ಕಂಡು ಬರು ವುದರಿಂದ ನಮ್ಮ ದೇಹದ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಇದು ಹೋರಾಡುತ್ತದೆ ಮತ್ತು ನಮ್ಮನ್ನು ದೀರ್ಘಕಾಲದ ಕಾಯಿಲೆಗಳು ಎನ್ನಲಾದ ಕ್ಯಾನ್ಸರ್ ಮತ್ತು ಹೃದಯದ ಸಮಸ್ಯೆಯಿಂದ ರಕ್ಷಿಸುತ್ತದೆ.
*ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ಸ್ ಒಳಗೊಂಡಿರುವ ಬೆಲ್ಲ ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಶಕ್ತಿ ಹೆಚ್ಚಾಗುತ್ತದೆ ಮತ್ತು ನಮ್ಮನ್ನು ಸದಾ ಚೈತನ್ಯದಿಂದ ಇರುವಂತೆ ಮಾಡುತ್ತದೆ.
*ಬೆಲ್ಲದಲ್ಲಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಖನಿಜಾಂಶಗಳು ಮತ್ತು ವಿಟಮಿನ್ ಅಂಶಗಳು ಇರುವುದ ರಿಂದ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಸೋಂಕುಗಳಿಗೆ ಸಂಬಂಧಪಟ್ಟಂತೆ ಔಷಧಿ ಸಿಕ್ಕಂತೆ ಆಗುತ್ತದೆ.
*ನಾವು ಸೇವಿಸಿದ ಆಹಾರ ಚೆನ್ನಾಗಿ ಜೀರ್ಣವಾಗಬೇಕು ಎಂದರೆ ಅದಕ್ಕೆ ಬೆಲ್ಲದ ತರಹ ಮತ್ತೊಂದು ಆಹಾರ ಅವಶ್ಯವಿದೆ.ಏಕೆಂದರೆ ಇಂತಹ ಆಹಾರಗಳು ನಮ್ಮ ದೇಹದಲ್ಲಿ ಅಜೀರ್ಣತೆ ಮಲಬದ್ಧತೆ ಮತ್ತು ಹೊಟ್ಟೆ ಉಬ್ಬರ ಸಮಸ್ಯೆಯನ್ನು ತಡೆಗಟ್ಟುತ್ತವೆ.