HEALTH TIPS: ಖಾಲಿ ಹೊಟ್ಟೆಯಲ್ಲಿ ವೀಳ್ಯೆದೆಲೆ ತಿನ್ನುವುರಿಂದ ಆಗುವ ಪ್ರಯೋಜನಗಳು

ವೀಳ್ಯದ ಎಲೆ
ವೀಳ್ಯದ ಎಲೆ
ಆರೋಗ್ಯ-ಜೀವನ ಶೈಲಿ

ನಿಸರ್ಗದಿಂದ ಸಿಗುವ ಯಾವುದೇ ವಸ್ತುವಾದರೂ ಅಷ್ಟೇ. ತುಂಬಾ ಆರೋಗ್ಯಕರ. ನಿಸರ್ಗದ ಮಡಿಲಿನಿಂದ ಸಿಗುವ ಪ್ರತಿಯೊಂದು ಆಹಾರ ಕೂಡ ನಮಗೆ ಉತ್ತಮ ಆರೋಗ್ಯವನ್ನು ದಯಪಾಲಿಸುತ್ತದೆ. ಯಾವುದೇ ತರಹದ ಅಡ್ಡ ಪರಿಣಾಮಗಳು ಎದುರಾಗುವುದಿಲ್ಲ. ಒಂದು ವೇಳೆ ಆದರೂ ತುಂಬಾ ಕಡಿಮೆ. ಊಟ ಆದ ತಕ್ಷಣ ಪ್ರತಿಯೊಬ್ಬರೂ ಎಲೆ ಅಡಿಕೆ ಹಾಕಿಕೊಳ್ಳಬೇಕು ಎಂದು ಹೇಳುತ್ತಾರೆ.
ಏಕೆಂದರೆ ಇದು ನಾವು ಸೇವಿಸಿದ ಆಹಾರವನ್ನು ಚೆನ್ನಾಗಿ ಜೀರ್ಣ ಮಾಡುತ್ತದೆ ಎಂದು.ನಮ್ಮ ಜೀರ್ಣಶಕ್ತಿ ಹೆಚ್ಚಿಸಿ ಅಜೀರ್ಣತೆಯನ್ನು ಮತ್ತುಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆ ಗಳನ್ನು ದೂರ ಮಾಡುವಲ್ಲಿ ವೀಳ್ಯದೆಲೆ ಬಹಳ ಚೆನ್ನಾಗಿ ಕೆಲಸ ಮಾಡುತ್ತದೆ. ಬೆಳಗ್ಗೆ ಎದ್ದು ಖಾಲಿ  ಹೊಟ್ಟೆಯಲ್ಲಿ ವೀಳ್ಯದೆಲೆ ಯಾರು ಸೇವನೆ ಮಾಡುತ್ತಾರೆ ಅವರಿಗೆ ಅನೇಕ ಆರೋಗ್ಯ ಪ್ರಯೋಜನಗಳು ಸಿಗುತ್ತವೆ. 

*ಬಾಯಿ ಸ್ವಚ್ಛ ಮಾಡುತ್ತದೆ

ವೀಳ್ಯದ ಎಲೆಯಲ್ಲಿ ಔಷಧೀಯ ಗುಣಗಳಿವೆ. ನಮ್ಮ ಬಾಯಿಯ ದುರ್ವಾಸನೆಯನ್ನು ವೀಳ್ಯದೆಲೆ ಸುಲಭವಾಗಿ ಹೋಗಲಾಡಿಸುತ್ತದೆ. ದಿನದಲ್ಲಿ ಆಗಾಗ ವೀಳ್ಯದ ಎಲೆ ಸೇವನೆ ಮಾಡುವುದರಿಂದ ನಮ್ಮ ಬಾಯಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾಗಳು ಮತ್ತು ಸೂಕ್ಷ್ಮಾಣುಗಳು ನಾಶವಾಗುತ್ತವೆ. 

*ಉಸಿರಾಟಕ್ಕೆ ನೆರವಾಗುತ್ತದೆ

ವೀಳ್ಯದ ಎಲೆಗಳು ಸಾಮಾನ್ಯವಾಗಿ ನಮ್ಮ ಉಸಿರಾಟ ವ್ಯವಸ್ಥೆಯನ್ನು ಸರಿಪಡಿಸುತ್ತವೆ. ಎದೆಯಲ್ಲಿ ಕಫ ಕಟ್ಟಿದ್ದರೆ, ಅದನ್ನು ಸಹ ಪರಿಹಾರ   ಮಾಡುತ್ತವೆ. ಶ್ವಾಸಕೋಶದ ಆರೋಗ್ಯ ಚೆನ್ನಾಗಿರುವಂತೆ ನೋಡಿ ಕೊಳ್ಳುತ್ತವೆ.

*ಜೀರ್ಣ ಶಕ್ತಿ ಹೆಚ್ಚಿಸುತ್ತದೆ

ವೀಳ್ಯದ ಎಲೆಯನ್ನುಜಗಿದು ಅದರ ರಸವನ್ನು ನಿಧಾನಕ್ಕೆ ಹೀರುತ್ತಾ ಬಂದರೆ ಹೊಟ್ಟೆಯ ಭಾಗದಲ್ಲಿ ಜೀರ್ಣಕ್ರಿಯೆಗೆ ನೆರವಾಗುವ ಜೀರ್ಣರಸಗಳು ಉತ್ಪತ್ತಿಯಾಗುತ್ತವೆ,ಅಷ್ಟೇ ಅಲ್ಲದೆ ಹೊಟ್ಟೆಯ ಉಬ್ಬರವನ್ನು ಮತ್ತು ಉರಿಯೂತವನ್ನು ಕಡಿಮೆ ಮಾಡಿ ಕರುಳಿನ ಭಾಗದಲ್ಲಿ ಕಂಡುಬರುವ ಪರಾವಲಂಬಿ ಜೀವಿಗಳನ್ನು ನಿಯಂತ್ರಣ ಮಾಡಿ ಸುಲಭವಾಗಿ ಹೊಟ್ಟೆಯ ಆಮ್ಲೀಯತೆಗೆ ಮತ್ತು ಮಲಬದ್ಧತೆ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ.

Author:

...
Sub Editor

ManyaSoft Admin

share
No Reviews