ಬೆಳ್ತಂಗಡಿ:
ಇತ್ತೀಚೆಗೆ ಯುವ ಜನತೆಯಲ್ಲಿ ಹೃದಯಾಘಾತವಾಗೋ ಪ್ರಮಾಣ ಹೆಚ್ಚಾಗಿದೆ. ಅದರಲ್ಲೂ ಆರೋಗ್ಯವಂತ ಯುವಕ, ಯುವತಿಯರೇ ಹಾರ್ಟ್ ಅಟ್ಯಾಕ್ ನಿಂದ ಸಾಯುತ್ತಿದ್ದಾರೆ, ಇತ್ತೀಚಿಗಷ್ಟೇ ಚಾಮರಾಜನಗರದಲ್ಲಿ 3ನೇ ತರಗತಿ ಓದುತ್ತಿದ್ದ 8 ವರ್ಷದ ಬಾಲಕಿ ಶಾಲೆಯಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಳು. ಅದಾದ ಬಳಿಕ ದೆಹಲಿಯಲ್ಲೂ ಶಾಲಾ ಬಾಲಕಿ ಹಾರ್ಟ್ ಅಟ್ಯಾಕ್ನಿಂದ ಸಾವನ್ನಪ್ಪಿದ್ದಳು. ಹಾಗೂ ತುಮಕೂರಿನಲ್ಲಿ ಸಹ ಪ್ರಥಮ ಪಿಯುಸಿ ಓದುತ್ತಿದ್ದ ಕಾಲೇಜ್ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ್ದನು, ಈ ಕಹಿ ಘಟನೆ ಮಾಸುವ ಮುನ್ನವೇ ಹೃದಯಾಘಾತದಿಂದ ಪದವಿ ಓದುತ್ತಿದ್ದ ವಿದ್ಯಾರ್ಥಿ ನಿಧನವಾಗಿರುವ ಘಟನೆ ಬೆಳ್ತಂಗಡಿಯ ತೋಟತ್ತಾಡಿ ಗ್ರಾಮದಲ್ಲಿ ನಡೆದಿದೆ.
ಬೆಳ್ತಂಗಡಿಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಜಯರಾಮ್ (19) ಗೆ ಜನವರಿ 22 ರಂದು ಬೆಳಿಗ್ಗೆ ಏಕಾಏಕಿ ಹ್ರದಯಾಘಾತ ಸಂಭವಿಸಿದ್ದು, ಬ್ರೇನ್ ಸ್ಟ್ರೋಕ್ ಸಂಭವಿಸಿತ್ತು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಫೆ. 17 ರಂದು ಸೋಮವಾರ ಸಾವನ್ನಪ್ಪಿದ್ದಾನೆ.