ಬೆಳಗಾವಿ : ಭೀಕರ ಅಪಘಾತ | ಕಾರಿನ ಮೇಲೆ ಉರುಳಿ ಬಿದ್ದ ಕಾಂಕ್ರೀಟ್‌ ಮಿಕ್ಸರ್‌ ಲಾರಿ

ಅಪಘಾತದಲ್ಲಿ ಕಾರು ನಜ್ಜು ಗುಜ್ಜಾಗಿರುವುದು.
ಅಪಘಾತದಲ್ಲಿ ಕಾರು ನಜ್ಜು ಗುಜ್ಜಾಗಿರುವುದು.
ಬೆಳಗಾವಿ

ಬೆಳಗಾವಿ:

ಚಲಿಸುತ್ತಿದ್ದ ಕಾರಿನ ಮೇಲೆ ಕಾಂಕ್ರೀಟ್‌ ಮಿಕ್ಸರ್‌ ಲಾರಿ ಉರುಳಿ ಬಿದ್ದು  ಇಬ್ಬರು ಗಾಯಗೊಂಡಿರುವಂತಹ ಘಟನೆ ಬೆಳಗಾವಿ ಹೊರವಲಯದ ಕೆಲ್‌ ಇ ಆಸ್ಪತ್ರೆ ಬಳಿ ನಡೆದಿದೆ. ಸದ್ಯ ಕಾರಿನಲ್ಲಿದ್ದವರು ಅಪಘಾತದಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಬೆಳಗಾವಿಯ ಬೆಂಗಳೂರು - ಪುಣೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಚಲಿಸುತ್ತಿದ್ದ ಕಾರಿನ ಮೇಲೆ ಬೆಳಗಾವಿ ಕಡೆಯಿಂದ ಬರುತ್ತಿದ್ದ ಕಾಂಕ್ರೀಟ್‌ ಮಿಕ್ಸರ್‌ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ಕಾರಿನ ಮೇಲೆ ಬಿದ್ದಿದೆ. ಲಾರಿ ಬಿದ್ದ ಪರಿಣಾಮ ಕಾರು ಅಪ್ಪಚ್ಚ ಆಗಿದ್ದು, ಕಾರಿನೊಳಗೆ ಇಬ್ಬರು ಸಿಲುಕಿ ನರಳಾಡಿದ್ದಾರೆ, ತಕ್ಷಣವೇ ಸಾರ್ವಜನಿಕರು ಮತ್ತು ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕಾಗಿಮಿಸಿ ಕ್ರೇನ್‌ ಬಳಸಿ ಕಾರಿನಲ್ಲಿದ್ದ ಪರಪ್ಪ ಬಾಳಿಕಾಯಿ, ನಿಂಗಪ್ಪ ಕೊಪ್ಪದ್‌ ಎಂಬುವರನ್ನು ರಕ್ಷಿಸಿದ್ದಾರೆ. ಲಾರಿ ಬಿದ್ದ ಪರಿಣಾಮ ಕಾರು ಅಪ್ಪಚ್ಚಿಯಾಗಿದ್ದು, ಸದ್ಯ ಕಾರಿನಲ್ಲಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

 

Author:

share
No Reviews