BEAUTY TIPS:
ಸಾಮಾನ್ಯವಾಗಿ ಎಲ್ಲರೂ ತಮ್ಮ ಚರ್ಮವು ಹೆಚ್ಚು ಆರೋಗ್ಯ ಹಾಗೂ ಆಕರ್ಷಣೆಯಿಂದ ಕೂಡಿರಬೇಕು ಎಂದೇ ಬಯಸುತ್ತಾರೆ. ಆದರೆ ದೈನಂದಿನ ಗಡಿಬಿಡಿಯ ಜೀವನ. ಅನುಚಿತ ಆರೈಕೆ, ಕಲುಷಿತ ಆಹಾರ ಮತ್ತು ಮಾಲಿನ್ಯಗಳಿಂದ ಅನೇಕ ಬಗೆಯ ಚರ್ಮ ಸಮಸ್ಯೆಯನ್ನು ಅನುಭವಿಸುತ್ತಾರೆ.
*ಹಬೆಯನ್ನು ತೆಗೆದುಕೊಳ್ಳುವುದು ಚರ್ಮಕ್ಕೆ ಹಬೆಯನ್ನು ನೀಡುವುದರ ಮೂಲಕ ನೈಸರ್ಗಿಕವಾಗಿಯೇ ಸ್ವಚ್ಛಗೊಳಿಸಬಹುದು. ಉಗಿಯಲ್ಲಿ ಇರುವ ಉಷ್ಣಾಂಶವು ಚರ್ಮದಲ್ಲಿರುವ ರಂಧ್ರಗಳನ್ನು ತೆರೆಯಲು ಸಹಾಯಮಾಡುತ್ತದೆ. ಅಲ್ಲದೆ ಸತ್ತ ಜೀವಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುವುದು. - 6-8 ಕಪ್ ನೀರನ್ನು ಚೆನ್ನಾಗಿ ಕುದಿಸಿ, ಒಂದು ಪಾತ್ರೆಗೆ ವರ್ಗಾಯಿಸಿ. - 5 ನಿಮಿಷದ ಬಳಿಕ ಒಂದು ಟವೆಲ್ ಹೊದಿಕೆಯೊಂದಿಗೆ ಹಬೆಯನ್ನು ತೆಗೆದುಕೊಳ್ಳಿ. 10 ನಿಮಿಷಗಳ ಕಾಲ ಹಬೆಯನ್ನು ತೆಗೆದುಕೊಳ್ಳಿ.
*ಒಂದು ಅಲೋವೆರಾ ಎಲೆಯನ್ನು ಕತ್ತರಿಸಿ ರಸವನ್ನು ಹಿಂಡಿಕೊಳ್ಳಿ. ಒಂದು ಕಪ್ ನೀರಿಗೆ 2 ಚಮಚ ಅಲೋವೆರಾ ಜೆಲ್ ಬೆರೆಸಿ. ಬಳಿಕ ಒಂದು ಹತ್ತಿಯ ಉಂಡೆಯಿಂದ ಮುಖಕ್ಕೆ ಹಚ್ಚಿ ಈ ಕ್ರಮವನ್ನು ಅನುಸರಿಸುವುದರಿಂದ ಚರ್ಮದ ಮೇಲಿರುವ ದದ್ದು ಮತ್ತು ಸುಟ್ಟ ಕಲೆಯು ನಿವಾರಣೆ ಹೊಂದುವುದು.
*ಒಂದು ಚಮಚ ಸಕ್ಕರೆ 1-2 ಹನಿ ನಿಂಬೆ ರಸ ಅಥವಾ ಕಿತ್ತಳೆ ರಸ. ಎಲ್ಲಾ ಸಲಕರಣೆಯನ್ನು ಮಿಶ್ರಗೊಳಿಸಿ. ಮಿಶ್ರಣವನ್ನು ಮುಖಕ್ಕೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿ. ಸ್ವಲ್ಪ ಸಮಯದ ಬಳಿಕ ತಣ್ಣೀರಿನಿಂದ ಶುಚಿಗೊಳಿಸಿ. ಬಳಿಕ ಅಗತ್ಯವಿದ್ದರೆ ಮಾಯ್ಚುರೈಸ್ ರೂಪದಲ್ಲಿ ತೆಳುವಾಗಿ ಎಣ್ಣೆಯನ್ನು ಸವರಿಕೊಳ್ಳಿ.
*1/4 ಕಪ್ ಹಾಲಿನ ಪುಡಿಗೆ ಸ್ವಲ್ಪ ನೀರನ್ನು ಸೇರಿಸಿ, ದಪ್ಪವಾದ ಪೇಸ್ಟ್ ಅನ್ನು ತಯಾರಿಸಿಕೊಳ್ಳಿ. ಮಿಶ್ರಣವನ್ನು ಮುಖಕ್ಕೆ ಹಚ್ಚಿ. ಸ್ವಲ್ಪ ಸಮಯದ ಬಳಿಕ ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ.