BEAUTY TIPS:
ಸಾಮಾನ್ಯವಾಗಿ ಮೂಗಿನ ಮೇಲೆ, ಕೆನ್ನೆಯ ಆಸುಪಾಸಿನಲ್ಲಿ ಹೆಚ್ಚಾಗಿ ಬ್ಲ್ಯಾಕ್ ಹೆಡ್ಸ್ ಕಾಣಿಸಿಕೊಳ್ಳುತ್ತದೆ.ಬ್ಲ್ಯಾಕ್ ಹೆಡ್ಸ್ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ.
ಕಪ್ಪು ಚುಕ್ಕೆಯ ತರಹ, ಮಸಿ ಹಚ್ಚಿದ ಹಾಗೆ, ಪದರದ ರೀತಿ, ಮುಳ್ಳು ಚುಚ್ಚಿದ ತರಹ ಕಾಣಿಸಿಕೊಳ್ಳುತ್ತದೆ. ಹೆಚ್ಚಾಗಿ ಇದು ಮೂಗಿನ ಮೇಲೆ ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಕೆನ್ನೆಯ ಆಸು ಪಾಸಿನಲ್ಲಿ ಬರುತ್ತದೆ. ಇದಕ್ಕೆ ಪಾರ್ಲರ್ ಗಲ್ಲಿ, ಚರ್ಮದ ವೈದ್ಯರು ಚಿಕಿತ್ಸೆ ಕೊಡುತ್ತಾರೆ. ಆದರೆ ಅವು ಶಾಶ್ವತವಾಗಿ ಹೋಗುವುದಿಲ್ಲ. ಹಾಗೆಂದ ಮಾತ್ರಕ್ಕೆ ಇದಕ್ಕೆ ಚಿಕಿತ್ಸೆ ಇಲ್ಲ ಎಂದರ್ಥವಲ್ಲ. ಇದಕ್ಕೂ ಪರಿಹಾರವಿದೆ. ಆದರೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ.ಇವನ್ನು ರಿಮೂವ್ ಮಾಡಲು ಅನಾವಶ್ಯಕ ಹಣ ಖರ್ಚು ಮಾಡುವ ಬದಲು ಮನೆಯಲ್ಲಿಯೇ ಸರಳವಾಗಿ ಮನೆ ಮದ್ದುಗಳನ್ನು ಬಳಸಿ
ಬ್ಲ್ಯಾಕ್ ಹೆಡ್ಸ್ ರಿಮೋವ್ ಮಾಡಲು ಈ ಮನೆ ಮದ್ದುಗಳನ್ನು ಉಪಯೋಗಿಸಿ
1]ನಿಂಬೆಹಣ್ಣು - ಬ್ಲ್ಯಾಕ್ ಹೆಡ್ಸ್ ರಿಮೋವ್ ಮಾಡಲು ಬಹಳ ಉಪಯುಕ್ತ. ಮೊದಲು ಬಿಸಿ ನೀರಿನಲ್ಲಿ ಮುಖ ತೊಳೆದು ನಂತರ ನಿಂಬೆ ಹಣ್ಣಿನ ರಸವನ್ನು ಮುಖಕ್ಕೆ ೫ ನಿಮಿಷ ಸ್ಕ್ರಬ್ ಮಾಡಿ ನಂತರ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ.
2]ರೋಸ್ ವಾಟರ್ - ರೋಸ್ ವಾಟರ್‌ನ ಮುಖಕ್ಕೆ ಹಚ್ಚಿ ೫ ನಿಮಿಷ ಬಿಟ್ಟು ಬಿಸಿನೀರಿನ ಹಬೆಯನ್ನು ತೆಗೆದುಕೊಳ್ಳಿ ನಂತರ ಮುಖ ತೊಳೆಯಿರಿ.
3]ಹರಿಶಿಣ – ಹರಿಶಿಣವನ್ನು ಹಾಲಿನೊಂದಿಗೆ ಕೆನೆಯೊಂದಿಗೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ೫ ನಿಮಿಷ ಬಿಟ್ಟು ನಂತರ ಮೂಗಿನ ಮೇಲೆ ಬ್ಲ್ಯಾಕ್ ಹೆಡ್ಸ್ ರಿಮೋವ್ ಮಾಡಿ ಮುಖ ತೊಳೆಯಿರಿ.