BEAUTY TIPS-ದುಬಾರಿ ಬೆಲೆಯ ಗೋಲ್ಡ್ ಫೇಶಿಯಲ್ ಅನ್ನು ಸುಲಭವಾಗಿ ಮನೆಯಲ್ಲೇ ಮಾಡಿಕೊಳ್ಳಿ

ದುಬಾರಿ ಬೆಲೆಯ ಗೋಲ್ಡ್‌ ಫೇಶಿಯಲ್‌ ಅನ್ನು ಸುಲಭವಾಗಿ ಮನೆಯಲ್ಲೇ ತಯಾರಿಸಬಹುದು. ಅಡುಗೆ ಮನೆಯಲ್ಲಿರುವ ವಸ್ತುಗಳನ್ನು ಬಳಸಿ ಈ ಫೇಶಿಯಲ್‌ ತಯಾರಿಸಬಹುದು. ಮಸಾಜ್‌ ಹಗೂ ಫೇಶಿಯಲ್‌ ತ್ವಚೆಯನ್ನು ಕಾಂತಿಯುತಗೊಳಿಸಲು  ಸಹಾಯ ಮಾಡುತ್ತದೆ. ಈ ಫೇಷಿಯಲ್‌ ಮಾಡುವುದರಿಂದ ಕಲೆಗಳು ಮಾಯವಾಗುತ್ತವೆ. ಮುಖದ ಮೇಲಿನ ಸೂಕ್ಷ್ಮ ರೇಖೆಗಳು, ಕಲೆಗಳು ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಆದರೆ ಪಾರ್ಲರ್‌ಗಳಲ್ಲಿ ಫೇಶಿಯಲ್‌ಗೆ ಹೆಚ್ಚು ಹಣ ತೆಗೆದುಕೊಳ್ಳುತ್ತಾರೆ.

ನಮ್ಮ ಮುಖ ಕೋಮಲವಾಗಿ, ಹೊಳಪನ್ನು ಪಡೆಯಬೇಕಾದರೆ ಆಗಾಗ ಫೇಶಿಯಲ್ ಮಾಡಿಸ್ತಾ ಇರಬೇಕು. ಕೆಲವರು ಬ್ಯೂಟಿ ಪಾರ್ಲರ್‌ಗೆ ಹೋಗಿ ಫೇಶಿಯಲ್ ಮಾಡಿಸುತ್ತಾರೆ, ಇನ್ನೂ ಕೆಲವರು ಮನೆಯಲ್ಲೇ ಫೇಶಲ್ ಮಾಡಿಸುತ್ತಾರೆ. ಫೇಶಿಯಲ್ ಮಾಡಿಸಲು ಎಷ್ಟು ಖರ್ಚಾಗುತ್ತದೆ. ಬಹಳಷ್ಟು ಮಹಿಳೆಯರು ಮದುವೆ ಸಮಾರಂಭಗಳಲ್ಲಿ ಈ ಫೇಶಿಯನ್‌ ಅನ್ನು ಮಾಡಿಸುತ್ತಾರೆ. ಗೋಲ್ಡನ್‌ ಫೇಶಿಯಲ್ ಮಾಡಿದ್ರೆ ಮುಖ ಚಿನ್ನದಂತೆ ಹೊಳೆಯದಿದ್ದರೂ ಮುಖಕ್ಕೆ ಚಿನ್ನದಂತಹ ಹೊಳಪು ನೀಡುತ್ತದೆ. ಆದ್ರೆ ಈ ಫೇಶಿಯಲ್ ದುಬಾರಿಯಾಗಿರುವುದರಿಂದ ಸಾಮಾನ್ಯ ದಿನಗಳಲ್ಲಿ ಮಾಡಿಸೋದು ಸ್ವಲ್ಪ ಕಷ್ಟವೇ ಸರಿ. ಅದಕ್ಕಾಗಿ ನಾವಿಂದು ಮನೆಯಲ್ಲೇ ಗೋಲ್ಡನ್ ಫೇಶಿಯಲ್‌ನ್ನು ಹೇಗೆ ಮಾಡಬಹುದು ಎನ್ನುವುದನ್ನು ನೋಡೋಣ.

 

*ಕ್ಲೆನ್ಸಿಂಗ್‌

ಒಂದು ಬೌಲ್‌ನಲ್ಲಿ ೧ ಚಮಚ ಆಲೋವೆರ ಜೆಲ್, ಸ್ವಲ್ಪ ಅರಿಶಿನ ಪುಡಿ ಮಿಕ್ಸ್‌ ಮಾಡಿ ನಂತರ ಮಖಕ್ಕೆ ಹಚ್ಚಿ ೨ ನಿಮಿಷ ಮಸಾಜ್‌ ಮಾಡಿ ಮುಖವನ್ನು ತೊಳೆಯಿರಿ

*ಸ್ರ್ಕಬ್ಬಿಂಗ್‌

ಒಂದು ಬೌಲ್‌ನಲ್ಲಿ ೧ ಚಮಚ ಅಕ್ಕಿಹಿಟ್ಟು, ಸ್ವಲ್ಪ ಅರಿಶಿನ ಪುಡಿ, ೨ ಚಮಚ ಹಸಿ ಹಾಲು ಹಾಕಿ ಮಿಕ್ಸ್‌ ಮಾಡಿ ನಂತರ ಮಖಕ್ಕೆ ಹಚ್ಚಿ ೨ ನಿಮಿಷ ಮಸಾಜ್‌ ಮಾಡಿ ಮುಖವನ್ನು ತೊಳೆಯಿರಿ.

*ಫೇಸ್‌ ಪ್ಯಾಕ್‌

ಒಂದು ಬೌಲ್‌ನಲ್ಲಿ ೧ ಚಮಚ ಕಿತ್ತಲೆ ಹಣ್ಣಿನ ಪೌಡರ್‌, ಸ್ವಲ್ಪ ಅರಿಶಿಣ ಪುಡಿ, ಒಂದು ಚಮಚ ಹಸಿ ಹಾಲು ಹಾಕಿ ಮಿಕ್ಸ್‌ ಮಾಡಿ ಮುಖಕ್ಕೆ ಹಚ್ಚಿ ೧೦ ನಿಮಿಷದ ಬಳಿಕ ಮುಖವನ್ನು ತೊಳೆಯಿರಿ.

Author:

...
Editor

ManyaSoft Admin

Ads in Post
share
No Reviews