Beauty Tips: ಬ್ಲಾಕ್ ಹೆಡ್ಸ್ ನಿವಾರಣೆಗೆ ಇದೊಂದೇ ಸಾಕು..!

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಆರೋಗ್ಯ-ಜೀವನ ಶೈಲಿ

ಬ್ಲಾಕ್‌ ಹೆಡ್ಸ್‌ ನಮ್ಮ ಮುಖದ ಸೌಂದರ್ಯವನ್ನೇ ಹಾಳು ಮಾಡುತ್ತದೆ. ಮೂಗಿನ ಮೇಲೆ, ಅಕ್ಕ ಪಕ್ಕದಲ್ಲಿ, ತುಟಿಯ ಪಕ್ಕದಲ್ಲಿ ಬ್ಲಾಕ್‌ ಹೆಡ್ಸ್‌ ಹೆಚ್ಚಾಗಿ ಕಂಡುಬರುತ್ತದೆ. ಇವುಗಳಿಂದಾಗಿ ಮುಖದ ಚರ್ಮವು ಸಡಿಲಗೊಳ್ಳಲು ಪ್ರಾರಂಭಿಸುತ್ತದೆ. ನಿಂಬೆಹಣ್ಣಿನ ಮೂಲಕ ಸುಲಭವಾಗಿ ಬ್ಲಾಕ್‌ ಹೆಡ್ಸ್‌ ಮತ್ತು ವೈಟ್‌ ಹೆಡ್ಸ್‌ ಎರದನ್ನೂ ಹೋಗಲಾಡಿಸಬಹುದು.

ಈ ಸಮಸ್ಯೆಗೆ ನಿಂಬೆಹಣ್ಣನ್ನು ಹೇಗೆ ಬಳಸಬೇಕೆಂದರೆ, ಕಪ್ಪು ಚುಕ್ಕೆಗಳಿಗೆ ನಿಂಬೆಹಣ್ಣು ತ್ವಚೆಯ ಆರೈಕಗೆ ತುಂಬಾ ಅತ್ಯಾವಶ್ಯಕವಾಗಿದೆ. ಇದು ಬಹಳ ಔಷಧಿಗಳಿಗಿಂತಲೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ನಿಂಬೆಹಣ್ಣನ್ನು ಬಳಸಿ ನಿಮ್ಮ ಮುಖದ ಪೋರ್ಸ್‌ ಓಪನ್‌ ಮಾಡಬಹುದು. ಬಳಿಕ ಬ್ಲಾಕ್‌ ಹೆಡ್ಸ್‌ ರಿಮೂವ್‌ ಮಾಡುವುದು ಸುಲಭವಾಗುತ್ತದೆ.

ಒಂದು ಚಮಚ ಅಡಿಗೆ ಸೋಡಾ ಮತ್ತು ಅರ್ಧ ಚಮಚ ನಿಂಬೆ ರಸವನ್ನು ಬೆರೆಸಿ ಪೇಸ್ಟ್‌ ಮಾಡಿ, ಈ ಪೇಸ್ಟ್‌ ಅನ್ನು ಎಲ್ಲೆಲ್ಲಿ ಬ್ಲಾಕ್‌ ಹೆಡ್ಸ್‌ ಇದೆಯೋ ಅಲ್ಲೆಲ್ಲ ಹಚ್ಚಿ, ಸ್ವಲ್ಪ ಹೊತ್ತು ಹಾಗೇ ಒಣಗಲು ಬಿಡಿ, ಪೇಸ್ಟ್‌ ಒಣಗಿದಾಗ ಅದನ್ನ ಅದನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ . ಹೀಗೆ ಮಾಡುವುದರಿಂದ ಬ್ಲಾಕ್‌ ಹೆಡ್ಸ್‌ ಕಡಿಮೆಯಾಗುತ್ತದೆ. ಇನ್ನು ವೈಟ್‌ ಹೆಡ್ಸ್‌ ಕೂಡ ತ್ವಚೆಯ ಅಂದವನ್ನು ಹಾಳು ಮಾಡುತ್ತದೆ. ಮೇದೋಗ್ರಂಥಿಗಳ ಸ್ರಾವವನ್ನು ಉತ್ಪಾದಿಸುವ ಗ್ರಂಥಿಗಳು ಊದಿಕೊಂಡಾಗ ಬಿಳಿ ಚುಕ್ಕೆಗಳು ರೂಪುಗೊಳ್ಳುತ್ತವೆ.

ವೈಟ್‌ ಹೆಡ್ಸ್‌ ಹೋಗಲಾಡಿಸಲು ನಿಂಬೆ ರಸ ಮತ್ತು ನೀರನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಅದನ್ನು ಬೆರಳುಗಳ ಸಹಾಯದಿಂದ ವೈಟ್‌ ಹೆಡ್ಸ್‌ ಮೇಲೆ ಹಚ್ಚಿ, ಲಘುವಾಗಿ ಮಸಾಜ್‌ ಮಾಡಿಕೊಂಡು 20 ನಿಮಿಷ ಹಾಗೇ ಬಿಟ್ಟು ನಂತರ ಮುಖವನ್ನು ತೊಳೆಯಬೇಕು. ಈ ರೀತಿ ಮಾಡುವುದರಿಂದ ವೈಟ್‌ ಹೆಡ್ಸ್‌ ನಿವಾರಣೆಯಾಗುತ್ತದೆ.

Author:

...
Editor

ManyaSoft Admin

Ads in Post
share
No Reviews