BCCI : ಟೀಮ್‌ ಇಂಡಿಯಾ ಆಟಗಾರರ ಮೋಜಿಗೆ ಬಿಸಿಸಿಐ ಬ್ರೇಕ್..

ಟೀಮ್ ಇಂಡಿಯಾ
ಟೀಮ್ ಇಂಡಿಯಾ
ಕ್ರಿಕೆಟ್‌

BCCI RULES : ಭಾರತ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಸೋಲಿನ ನಂತರ ಟೀಮ್ ಇಂಡಿಯಾ ಆಟಗಾರರು ಟೀಕೆಗಳಿಗೆ ಗುರಿಯಾಗಿದ್ದು,ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಭಾರತ ವಿಫಲವಾಗಿದ್ದರಿಂದ, ಬಿಸಿಸಿಐ ಟೀಮ್ ಇಂಡಿಯಾದಲ್ಲಿ ಶಿಸ್ತು ಪಾಲನೆ ಮಾಡುವ ಸಲುವಾಗಿ ಆಟಗಾರರಿಗೆ ಬಿಸಿಸಿಐ 10 ಹೊಸ ಕಠಿಣ ನಿಯಮಗಳನ್ನು ಮಾಡಿದೆ. ಇವುಗಳನ್ನು ಪಾಲಿಸದಿದ್ದರೆ ಆಟಗಾರರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಬಿಸಿಸಿಐ ಬೋರ್ಡ್ ತಿಳಿಸಿದೆ.ಕಿರಿಯ ಆಟಗಾರರಿಂದ ಹಿಡಿದು ಹಿರಿಯ ಆಟಗಾರರವರೆಗೆ ಎಲ್ಲರಿಗೂ ಇದು ಅನ್ವಯ ಆಗಲಿದೆ.‌

BCCI ನ ನಿಯಮಗಳು ;

ಎಲ್ಲ ಆಟಗಾರರು ದೇಶಿಯ ಪಂದ್ಯಗಳನ್ನು ಆಡಲೇಬೇಕು ಎಂದು ಬಿಸಿಸಿಐ ಹೇಳಿದೆ. ಇದರಿಂದ ಆಟಗಾರರು ಫಾರ್ಮ್ ಉಳಿಸಿಕೊಳ್ಳಲು, ತರಬೇತಿ ಪಡೆಯಲು ಸಹಾಯ ಆಗುತ್ತದೆ. ತಪ್ಪುಗಳನ್ನು ತಿದ್ದಿಕೊಳ್ಳಲು ದೇಶಿಯ ಸರಣಿ ಸಹಕಾರಿ ಆಗಲಿದೆ ಎಂದು ಬಿಸಿಸಿಐ ಅಭಿಪ್ರಾಯಪಟ್ಟಿದೆ. ಪ್ರ್ಯಾಕ್ಟೀಸ್ ಮ್ಯಾಚ್​​ಗಳಿಗೆ ಕೆಲ ಆಟಗಾರರು ಪ್ರತ್ಯೇಕವಾಗಿ ಬರುತ್ತಿದ್ದರು. ಇದಕ್ಕೆ ಈಗ ಕಡಿವಾಣ ಹಾಕಲಾಗಿದೆ. ಈ ಮೂಲಕ ಶಿಸ್ತನ್ನು ತರಲು ಬಿಸಿಸಿಐ ಪ್ರಯತ್ನಿಸಿದೆ. ತೀರ ಅಗತ್ಯ ಬಿದ್ದಲ್ಲಿ ಹೆಡ್ ಕೋಚ್​ನ ಅನುಮತಿ ಪಡೆಯಬೇಕು.

ಬ್ಯಾಗೇಜ್ ಪಾಲಿಸಿಯನ್ನು ಕೂಡ ತರಲಾಗಿದ್ದು, ಆಟಗಾರರು ನಿಗದಪಡಿಸಿದ ತೂಕದಲ್ಲೇ ಬ್ಯಾಗ್​ನ ತರಬೇಕು. ಆಟಗಾರರು ಕರೆತರುವ ಮ್ಯಾನೇಜರ್​ಗಳು, ಬಾಣಸಿಗ ಅವರೆಲ್ಲರಿಗೂ ಕಡಿವಾಣ ಹಾಕಲಾಗಿದೆ.ತರಬೇತಿ ವೇಳೆ ಎಲ್ಲರೂ ಹಾಜರಿ ಹಾಕಬೇಕು. ಸರಿಯಾದ ಸಮಯಕ್ಕೆ ಇರುವುದು ಕೂಡ ಕಡ್ಡಾಯ. ಸೀರಿಸ್ ವೇಳೆ ಜಾಹೀರಾತು ಶೂಟಿಂಗ್ ಹಾಗೂ ಬ್ರ್ಯಾಂಡ್​ಗಳ ಪ್ರಚಾರಕ್ಕೆ ಬ್ರೇಕ್ ಪಡೆಯುವುದರ ಮೇಲೆ ಕಡಿವಾಣ ಹಾಕಲಾಗಿದೆ. ಈ ಮೂಲಕ ಕ್ರಿಕೆಟ್ ಮೇಲೆ ಆಟಗಾರರ ಗಮನ ಹರಿಸಬೇಕು.

ಸರಣಿ ವೇಳೆ ಕುಟುಂಬದವರ ಭೇಟಿಗೂ ಹಲವು ಷರತ್ತುಗಳನ್ನು ಬಿಸಿಸಿಐ ತಂದಿದೆ. 45 ದಿನಕ್ಕೂ ಅಧಿಕ ದಿನ ಆಟಗಾರರು ವಿದೇಶದಲ್ಲಿ ನಡೆಯುವ ಸರಣಿಗಾಗಿ ಇರುತ್ತಾರೆ ಎಂದರೆ ಪತ್ನಿ ಹಾಗೂ ಮಗು ಭೇಟಿ ಮಾಡಬಹುದು ಮತ್ತು ಎರಡು ವಾರ ಮಾತ್ರ ಇರಬಹುದು.ಬಿಸಿಸಿಐ ನಡೆಸುವ ಶೂಟ್, ಪ್ರಮೋಷನಲ್ ಆ್ಯಕ್ಟಿವಿಟಿಯಲ್ಲಿ ಆಟಗಾರರು ಭಾಗಿ ಆಗಲೇಬೇಕು. ಪಂದ್ಯ ನಿಗದಿಪಡಿಸಿದ ಸಮಯಕ್ಕಿಂತ ಮೊದಲೇ ಪೂರ್ಣಗೊಂಡರೂ ಆಟಗಾರರು ತಂಡದ ಜೊತೆ ಇರಲೇಬೇಕು ಎಂಬ ನಿಯಮ ಇದೆ.

ಈ  ನಿಯಮಗಳನ್ನು ಪಾಲಿಸದಿದ್ದಲ್ಲಿ ಆಟಗಾರರ ಕೇಂದ್ರೀಯ ಒಪ್ಪಂದಗಳಿಂದ ರಿಟೈನರ್ ಶುಲ್ಕವನ್ನು ಕಡಿತಗೊಳಿಸಲಾಗುತ್ತದೆ. ಜೊತೆಗೆ ಐಪಿಎಲ್‌ ನಲ್ಲಿ ಆಡುವುದಕ್ಕೆ ನಿಷೇಧ ಸೇರಿದಂತೆ ಆಟಗಾರನ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವ ಹಕ್ಕನ್ನು ಬಿಸಿಸಿಐ ಕಾಯ್ದಿರಿಸಿಕೊಂಡಿದೆ. ಬಿಸಿಸಿಐ ಆಯೋಜಿಸುವ ಎಲ್ಲಾ ಟೂರ್ನಿಗಳಲ್ಲಿ ಭಾಗವಹಿಸದ ಆಟಗಾರನ ವಿರುದ್ಧ ನಿಷೇಧದ ಶಿಕ್ಷೆ ಕೂಡ ಒಳಗೊಂಡಿರುತ್ತದೆ. 

 

Author:

...
Editor

ManyaSoft Admin

Ads in Post
share
No Reviews