ಕೊರಟಗೆರೆ:
ಇಂದು ಕೊರಟಗೆರೆ ಪಟ್ಟಣದ ವಕೀಲರ ಸಂಘಕ್ಕೆ ಚುನಾವಣೆ ನಡೆದಿದ್ದು, ಕೇವಲ ಒಂದು ಮತದ ಅಂತರದಲ್ಲಿ ಅಧ್ಯಕ್ಷರಾಗಿ ಎಂ.ಎಲ್ ಸಂತೋಷ್, ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ್, ಉಪಾಧ್ಯಕ್ಷರಾಗಿ ಹನುಮಂತರಾಜು, ಖಚಾಂಚಿಯಾಗಿ ಅರುಂಧತಿ ಹಾಗೂ ಜಂಟಿ ಕಾರ್ಯದರ್ಶಿಯಾಗಿ ಕೃಷ್ಣಪ್ಪ ಆಯ್ಕೆಯಾದ್ರು. ಈ ವೇಳೆ ಮಾಜಿ ಅಧ್ಯಕ್ಷ ಬಿ.ಎಲ್ ನಾಗರಾಜು, ಎ.ಎಂ. ಕೃಷ್ಣಮೂರ್ತಿ, ಪುಟ್ಟರಾಜಯ್ಯ, ಅನಿಲ್ ಕುಮಾರ್ ಸೇರಿ ಹಲವರು ಭಾಗಿಯಾಗಿದ್ರು.
32 ಮಂದಿ ಸದಸ್ಯರಿರುವ ಕೊರಟಗೆರೆ ವಕೀಲರ ಸಂಘದ ಹಲವು ಸ್ಥಾನಕ್ಕೆ ಚುನಾವಣೆ ನಡೆಸಲಾಯ್ತು, ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಜಿ.ಡಿ.ದೇವರಾಜು, ಟಿ ಕೃಷ್ಣಮೂರ್ತಿ, ಎಂ.ಎಲ್.ಸಂತೋಷ್ ಹಾಗೂ ಜಂಟಿ ಕಾರ್ಯದರ್ಶಿ ಸಂತೋಷಲಕ್ಷ್ಮಿ ಮತ್ತು ಕೃಷ್ಣಪ್ಪ ಸ್ಪರ್ಧಿಸಿದ್ರು, ಆದ್ರೆ ಅಧ್ಯಕ್ಷರಾಗಿ ಸಂತೋಷ್ ಮತ್ತು ಜಂಟಿ ಕಾರ್ಯದರ್ಶಿಯಾಗಿ ಕೃಷ್ಣಪ್ಪ ಆಯ್ಕೆಯಾದ್ರು, ಅಲ್ದೇ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿ ಸ್ಥಾನಗಳಿಗೆ ಚುನಾವಣೆ ನಡೆಯದೇ ಅವಿರೋಧವಾಗಿ ಆಯ್ಕೆ ಮಾಡಲಾಯ್ತು.