ಬೆಂಗಳೂರು: ಬೆಂಗಳೂರಿನಲ್ಲಿ ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ

ಮೃತ ವ್ಯಕ್ತಿ ಹೈದರ್‌ ಅಲಿ
ಮೃತ ವ್ಯಕ್ತಿ ಹೈದರ್‌ ಅಲಿ
ಬೆಂಗಳೂರು ನಗರ

ಬೆಂಗಳೂರು:

ಬೆಂಗಳೂರು ನಗರದ ಗರುಡಾ ಮಾಲ್ ನ ಬಳಿ ಶನಿವಾರ ತಡರಾತ್ರಿ 1 ಗಂಟೆ ಸುಮಾರಿಗೆ ಕಾಂಗ್ರೆಸ್‌ ಮುಖಂಡನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಕಾಂಗ್ರೆಸ್‌ ಮುಖಂಡ ಹೈದರ್‌ ಅಲಿ ಕೊಲೆಯಾದ ವ್ಯಕ್ತಿ, ಹೈದರ್‌ ಅಲಿ ನೆನ್ನೆ ರಾತ್ರಿ ಸುಮಾರು 1 ಗಂಟೆ ಸಮಯದಲ್ಲಿ ಲೈವ್ಬ್ಯಾಂಡ್‌ ಕಾರ್ಯಕ್ರಮ ಮುಗಿಸಿಕೊಂಡು ಸ್ನೇಹಿತನ ಜೊತೆ ಬೈಕ್‌ ನಲ್ಲಿ ತೆರಳುತ್ತಿದ್ದಾಗ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ ಎಸ್ಕೇಪ್‌ ಆಗಿದ್ದಾರೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಅಶೋಕ ನಗರ ಠಾಣೆ ಪೊಲೀಸರು ಬರುವಷ್ಟರಲ್ಲಿ ಹೈದರ್ಅಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಅವರನ್ನು ಹತ್ತಿರದ ಬೌರಿಂಗ್ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಘಟನೆ ವೇಳೆ ಹೈದರ್‌ ಅಲಿ ಜೊತೆಯಿದ್ದ ಸ್ನೇಹಿತ ಕೂಡ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತ ವ್ಯಕ್ತಿಯು ಬೆಂಗಳೂರಿನ ಆನೆಪಾಳ್ಯ ನಿವಾಸಿಯಾಗಿದ್ದು, ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್..ಹ್ಯಾರಿಸ್ ಅವರ ಆಪ್ತ ಎನ್ನಲಾಗಿದೆ. ವಿಷಯ ತಿಳಿದು ಅವರ ಬೆಂಬಲಿಗರು ಶಿವಾಜಿನಗರದ ಬೌರಿಂಗ್ಆಸ್ಪತ್ರೆ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಆಕ್ರೋಶ ಹೊರಹಾಕಿದ್ದಾರೆ.  ಆಸ್ಪತ್ರೆ ಬಳಿ ಲಾಂಗು, ಮಚ್ಚು ಹಿಡಿದು ಬೌರಿಂಗ್ ಆಸ್ಪತ್ರೆ ಗೇಟ್ ತಳ್ಳಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಅಶೋಕನಗರ ಠಾಣೆ ಪೊಲೀಸರು ಬಂದು ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಘಟನೆ ಸಂಬಂಧ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ಆರೋಪಿಗಳ ಪತ್ತೆಗೆ ಅಶೋಕನಗರ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Author:

...
Editor

ManyaSoft Admin

Ads in Post
share
No Reviews