AIR SHOW 2025:
ಈ ಬಾರಿ ಏರ್ ಶೋ ನಲ್ಲಿ ಸುಮಾರು 100 ದೇಶಗಳು ಭಾಗಿಯಾಗಿದ್ದು, ಸಾವಿರಾರು ಮಂದಿ ಆಗಮಿಸಿ ಆಗಸದಲ್ಲಿ ಆಗ್ತಿರೋ ಲೊಹದ ಹಕ್ಕಿಗಳ ಕಲರವವನ್ನು ಕಣ್ತುಂಬಿಕೊಂಡು ನಿಬ್ಬೆರಗಾಗುತ್ತಿದ್ದಾರೆ. ಅದ್ರಲ್ಲೂ ಸ್ವದೇಶಿ ವಿಮಾನಗಳ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿದ್ದು, ವಿಶೇಷವಾಗಿವೆ. ಯಲಹಂಕದಲ್ಲಿ ನಡೆಯುತ್ತಿರುವ ಏರ್ ಶೋ ಗೆ ಇಂದಿನಿಂದ ಸಾರ್ವಜನಿಕರಿಗೆ ಏರ್ ಶೋ ವೀಕ್ಷಣೆಗೆ ಅವಕಾಶ ಸಿಕ್ಕಿದ್ದು, ಲೋಹದಕ್ಕಿಗಳ ಆರ್ಭಟಕ್ಕೆ ಮಾರು ಹೋಗಿದ್ದಾರೆ.
ಮೊದಲ ಮೂರು ದಿನ ಕೇವಲ ಆಹ್ವಾನಿತರಿಗೆ ಅವಕಾಶವಿತ್ತು. ಈಗ ಇಂದು ಮತ್ತು ನಾಳೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಎರಡೂವರೆ ಸಾವಿರಕ್ಕೆ ಟಿಕೆಟ್ ಪಡೆದವರು ಸಂಪೂರ್ಣ ಏರೋ ಇಂಡಿಯಾ ವೀಕ್ಷಣೆಗೆ ಅವಕಾಶ ಇರಲಿದೆ. ಇಂದು ಬೆಳ್ಳಿಗ್ಗೆ 9.30 ರಿಂದ 12 ಹಾಗೂ ಮಧ್ಯಾಹ್ನ 2.30 ರಿಂದ ಸಂಜೆ 5 ರವರೆಗೆ ಏರ್ ಶೋನಲ್ಲಿ ಸೂರ್ಯಕಿರಣ, ಅಮೇರಿಕದ ಎಫ್ -35, ಹಾಗೂ ರಷ್ಯಾದ ಎಸ್ ಯು 57, ತೇಜಸ್ , ಹಗರ ಯುದ್ದ ಹೆಲಿಕಾಪ್ಟರ್ ಪ್ರದರ್ಶನ ಕಣ್ಮನ ಸೆಳೆದಿದೆ.
ಎರಡೂವರೆ ಸಾವಿರ, 5 ಸಾವಿರ ಟಿಕೆಟ್ ಪಡೆದವರಿಗೆ ಕಾರ್ಯಕ್ರಮ ಪ್ರದೇಶದ ಹೊರಭಾಗ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಏರ್ ಶೋ ಜಾಗಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದಲ್ಲದೇ ವಾಯು ನೆಲೆ ಸುತ್ತಲಿನ ಬಡಾವಣೆಗಳ ಬಳಿಯೂ ಭಾರಿ ಜನರು ಜಮಾಹಿಸಿದ್ದಾರೆ.