GLEN MAXWELL RETAIRMENT : ಆಸ್ಟ್ರೇಲಿಯಾ ತಂಡದ ಆಲ್ರೌಂಡರ್ ಗ್ಲೆನ್ GLEN MAXWELL ಇದೀಗ ಏಕದಿನ ಕ್ರಿಕೆಟ್ಗೆ [ODI CRICET] ವಿದಾಯ ತಿಳಿಸಿದ್ದಾರೆ. ಟಿ20 ಕ್ರಿಕೆಟ್ ನತ್ತ ಹೆಚ್ಚು ಗಮನ ಹರಿಸಲು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದೆ.
ಮ್ಯಾಕ್ಸ್ವೆಲ್ ಅವರು 2012 ರಿಂದ 2025 ರವರೆಗೆ 149 ಏಕದಿನ ಪಂದ್ಯಗಳಲ್ಲಿ Australia ತಂಡವನ್ನು ಪ್ರತಿನಿಧಿಸಿದ್ದು, ಒಟ್ಟು 3,990 ರನ್ಗಳು ಮತ್ತು 77 ವಿಕೆಟ್ಗಳನ್ನು ಪಡೆದುಕೊಂಡಿದ್ದಾರೆ. ಅವರು 2015 ಮತ್ತು 2023 ರ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ಪ್ರಮುಖ ಸದಸ್ಯ ರಾಗಿದ್ದರು.
ಇನ್ನು ಬಲಗೈ ಸ್ಫೋಟಕ ಬ್ಯಾಟ್ಸ್ಮನ್ ಆಗಿರುವ ಮ್ಯಾಕ್ಸ್ವೆಲ್, 33.81 ರ ಸರಾಸರಿ ಮತ್ತು 126.70 ರ Strike rate ನೊಂದಿಗೆ ತಮ್ಮ ಆಟದಿಂದ ಹಲವಾರು ಪಂದ್ಯಗಳಲ್ಲಿ ಸೋತಿರುವ ತಂಡವನ್ನು ಗೆಲುವಿನತ್ತ ಕರೆದಿದ್ದಾರೆ. 2023ರ ವಿಶ್ವಕಪ್ನಲ್ಲಿ [World cup] ಅಫ್ಘಾನಿಸ್ತಾನ ವಿರುದ್ಧ ಅವರು ಗಳಿಸಿದ ಅಜೇಯ 201 ರನ್ಗಳು ಇಂದು ಕೂಡ ಅಭಿಮಾನಿಗಳ ಮನಸ್ಸಿನಲ್ಲಿದೆ.
ಅವರು ಏಕದಿನ ಕ್ರಿಕೆಟ್ನಲ್ಲಿ 4 ಶತಕಗಳು, 23 ಅರ್ಧಶತಕಗಳು, 4 ಬಾರಿ ನಾಲ್ಕು ವಿಕೆಟ್, ಮತ್ತು 91 ಕ್ಯಾಚ್ಗಳು ದಾಖಲಿಸಿದ್ದಾರೆ. ಬ್ಯಾಟಿಂಗ್ನೊಂದಿಗೆ ಜೊತೆಗೆ ಅವರ Off spin bowling ಕೂಡ ತಂಡಕ್ಕೆ ಬಲ ನೀಡಿತು.
INDIA ಮತ್ತು SRI LANKA ದಲ್ಲಿ ನಡೆಯಲಿರುವ 2026ರ ಟಿ20 ವಿಶ್ವಕಪ್ ಗೆ ಸಂಪೂರ್ಣ ರೀತಿಯಲ್ಲಿ ತಯಾರಿ ನಡೆಸುವ ಉದ್ದೇಶದಿಂದ ಮ್ಯಾಕ್ಸ್ವೆಲ್ ಏಕದಿನ ಕ್ರಿಕೆಟ್ ನಿಂದ ನಿವೃತ್ತಿ [RETAIRMENT] ಘೋಷಿಸಿದ್ದಾರೆ.