ದೇಶ: ಭಯೋತ್ಪದರ ಮನೆಗಳನ್ನ ಉಡೀಸ್ ಮಾಡಿದ ಆರ್ಮಿ

ದೇಶ: 

ಪಹಲ್ಗಾಮ್ ನ ದಾಳಿಯಲ್ಲಿ ಸ್ಥಳೀಯ ಕುದುರೆ ಸವಾರ ಸೇರಿದಂತೆ 26 ಪ್ರವಾಸಿಗರನ್ನು ಉಗ್ರರು ಹತ್ಯೆ ಮಾಡಿದ್ರು. ಇದಕ್ಕೆ ಪ್ರತ್ಯುತ್ತವಾಗಿ ನಮ್ಮ ಇಂಡಿಯನ್‌ ಆರ್ಮಿ ದಕ್ಷಿಣ ಕಾಶ್ಮೀರದ ಟ್ರಾಲ್ ಮತ್ತು ಬಿಜ್‌ಬೆರಾ ಪ್ರದೇಶದಲ್ಲಿನ ಇಬ್ಬರು ಲಷ್ಕರ್--ತೋಯ್ಬಾ ಭಯೋತ್ಪಾದಕರ ಮನೆ ಮೇಲೆ ದಾಳಿ ನಡೆಸಿ ನೆಲಸಮ ಮಾಡಿದೆ. 

ಬೈಸರನ್ ಪಹಲ್ಗಾಮ್ ದಾಳಿಯಲ್ಲಿ ಪ್ರಮುಖ ಪಾತ್ರವಿರುವ ಆರೋಪದ ಹಿನ್ನೆಲೆಯಲ್ಲಿ ಪುಲ್ವಾಮಾ ಜಿಲ್ಲೆಯ ಟ್ರಾಲ್‌ನಲ್ಲಿರುವ ಆಸಿಫ್ ಶೇಖ್ ಮತ್ತು ಅನಂತ್‌ನಾಗ್ ಜಿಲ್ಲೆಯ ಬಿಜ್‌ಬೆರಾದಲ್ಲಿರುವ ಆದಿಲ್ ಥೋಕರ್ ಮನೆಗಳನ್ನು ಹೊಡೆದುರುಳಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಬಿಜ್‌ಬೆಹರಾ ಬ್ಲಾಕ್‌ನಲ್ಲಿರುವ ಗುರಿ ಗ್ರಾಮದ ನಿವಾಸಿ ಆದಿಲ್ ಗುರಿ ಎಂಬಾತನೂ ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತಿವಾಗಿತ್ತು. ಇನ್ನು ಆತನನ್ನು ಮೋಸ್ಟ್ ವಾಂಟೆಡ್ ಎಂದು  ಕೂಡ ಗುರುತಿಸಲಾಗಿತ್ತು. ಇನ್ನು  ಆತನ ಬಗ್ಗೆ ನಿರ್ದಿಷ್ಟ ಮಾಹಿತಿ ನೀಡಿದವರಿಗೆ 20 ಲಕ್ಷ ರೂ.ಬಹುಮಾನ ನೀಡುವುದಾಗಿ ಅನಂತನಾಗ್ ಪೊಲೀಸರು ಘೋಷಿಸಿದ್ದಾರೆ. 

 

Author:

...
Keerthana J

Copy Editor

prajashakthi tv

share
No Reviews