ಮಧುಗಿರಿ:
ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕು ಜಕ್ಕೇನಹಳ್ಳಿಯಲ್ಲಿರುವ ಅಹೋಬಲ ನರಸಿಂಹ ದೇವಸ್ಥಾನಕ್ಕೆ ಸ್ಯಾಂಡಲ್‌ವುಡ್ ನಟ ಅರ್ಜುನ್ ಸರ್ಜಾ ಹಾಗೂ ಧ್ರುವ ಸರ್ಜಾ ಹುಟ್ಟೂರಿಗೆ ಭೇಟಿ ನೀಡಿ ರಥೋತ್ಸವದಲ್ಲಿ
ಭಾಗಿಯಾಗಿ ತೇರು ಎಳೆದಿದ್ದಾರೆ. ಹುಟ್ಟೂರಿನ ಅಹೋಬಲನರಸಿಂಹಸ್ವಾಮಿ ಜಾತ್ರೆಯಲ್ಲಿ ಇಡೀ ಸರ್ಜಾ ಕುಟುಂಬ ಭಾಗಿಯಾಗಿದೆ. ಒಂದು ಕಡೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪತ್ನಿ ಜೊತೆಗೆ ಬಂದರೆ, ಅತ್ತ ನಟ ಅರ್ಜುನ್ ಸರ್ಜಾ ಹಾಗೂ ಕುಟುಂಬ ಹುಟ್ಟೂರಿಗೆ ಭೇಟಿ ಕೊಟ್ಟಿದೆ. ಒಂದು ಕಡೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪತ್ನಿ ಜೊತೆಗೆ ಬಂದರೆ, ಅತ್ತ ನಟ ಅರ್ಜುನ್ ಸರ್ಜಾ ಹಾಗೂ ಕುಟುಂಬ ಹುಟ್ಟೂರಿಗೆ ಭೇಟಿ ಕೊಟ್ಟಿದೆ.
ಪ್ರತಿ ವರ್ಷವೂ ಸರ್ಜಾ ಕುಟುಂಬಸ್ಥರು ಈ ಜಾತ್ರೆಗೆ ಬರುತ್ತಾ ಇರುತ್ತಾರೆ. ಅದರಂತೆ ಈ ಬಾರಿಯೂ ಅಹೋಬಲ ನರಸಿಂಹಸ್ವಾಮಿಯ ರಥೋತ್ಸವದಲ್ಲಿ ಭಾಗಿಯಾಗಿ ರಥ ಎಳೆದು ಪೂಜೆ ಸಲ್ಲಿಸಿದ್ದಾರೆ. ಇಂದು ಜಕ್ಕೇನಹಳ್ಳಿಯಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ ಅರ್ಜುನ್ ಸರ್ಜಾ ಕುಟುಂಬಸ್ಥರು ಭಾಗಿಯಾಗಿದ್ದಾರೆ. ಮನೆ ದೇವರು ಅಹೋಬಲ ನರಸಿಂಹ ಸ್ವಾಮಿಯ ರಥ ಎಳೆದಿದ್ದಾರೆ. ಈ ವೇಳೆ, ಸ್ಟಾರ್ ನಟರಾದ ಅರ್ಜುನ್ ಸರ್ಜಾ ಮತ್ತು ಧ್ರುವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಫ್ಯಾನ್ಸ್ ಕಂಟ್ರೋಲ್‌ಗೆ ಪೊಲೀಸರು ಹರಸಾಹಸ ಪಟ್ಟಿದ್ದಾರೆ.