ಸಿನಿಮಾ-ಟಿವಿ :
ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಸಖತ್ ಫೇಮಸ್ ಆಗಿದ್ದ ನಟ ರಕ್ಷಕ್ ಬುಲೆಟ್, ಸದ್ಯ ಭರ್ಜರಿ ಬ್ಯಾಚುಲರ್ಸ್ ವೇದಿಕೆಗೆ ರಕ್ಷಕ್ ಬುಲೆಟ್ ಕಡೆಯಿಂದ ಒಂದೊಳ್ಳೆಯ ಕೆಲಸ ಆಗಿದೆ. ಜೀ ಕನ್ನಡದ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೆ ಮೇಲೆ ಕನ್ನಡಿಗರ ಪ್ರೀತಿಯ ಅಪ್ಪು, ಪವರ್ ಸ್ಟಾರ್, ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಅವರ ಹಾದಿಯನ್ನೇ ಇದೀಗ ರಕ್ಷಕ್ ಬುಲೆಟ್ ಹಿಡಿದಿದ್ದಾರೆ. ತಮ್ಮ ನೇತ್ರದಾನದ ಮೂಲಕ ಅಂಧರ ಬಾಳು ಬೆಳಗಿದ ಅಪ್ಪು, ಅಂಗಾಂಗ ದಾನದ ಅರಿವು ಮೂಡಿಸಿದ್ರು.
ಇದೀಗ ಇದೇ ಸಾಲಿನಲ್ಲಿ ರಕ್ಷಕ್ ಬುಲೆಟ್ ತಮ್ಮ ಲಿವರ್ನ ಬೇರೆಯವರಿಗೆ ಕೊಡೋದಾಗಿ ಪ್ರತಿಜ್ಞೆ ಮಾಡಿದ್ದಾರೆ. ಅವರನ್ನು ನೋಡಿ ನಟಿ ರಮೋಲಾ ಕೂಡ ಇದೇ ರೀತಿಯ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ವೇಳೆ ರಚಿತಾ ಅವರು ನಿಮಗೆ ಒಳ್ಳೆಯ ಹೃದಯ ಇದೆ ಎಂದು ಮೆಚ್ಚುಗೆಯ ಮಾತನಾಡಿದ್ದಾರೆ.