ತುಪ್ಪದಲ್ಲಿ ಇರುವ ಆರೋಗ್ಯ ಗುಣಗಳಿಂದಾಗಿ ಅದನ್ನು ಆಯುರ್ವೇದದಲ್ಲಿ ಹಿಂದಿನಿಂದಲೂ ಔಷಧಿಯಾಗಿ ಬಳಕೆ ಮಾಡಿಕೊಂಡು ಬರಲಾಗಿದೆ. ಹಾಲಿನ ಕೊಬ್ಬು ಮತ್ತು ವಿಟಮಿನ್ ಇ ಇರುವ ತುಪ್ಪವು ಚರ್ಮಕ್ಕೆ ಒಳ್ಳೆಯ ಆಯ್ಕೆ ಮತ್ತು ಇದು ನೈಸರ್ಗಿಕ ವಿಧಾನದಿಂದ ಚರ್ಮವನ್ನು ಹೈಡ್ರೇಟ್ ಮಾಡುವುದು. ತುಪ್ಪವನ್ನು ಬಳಸಿದರೆ ಆಗ ಚರ್ಮವನ್ನು ಆಳವಾಗಿ ಮೊಯಿಶ್ಚರೈಸ್ ಆಗುವುದು.
ತುಪ್ಪವು ನೈಸರ್ಗಿಕ ಮೊಯಿಶ್ಚರೈಸರ್ ಆಗಿದ್ದು, ಇದು ಚರ್ಮವನ್ನು ಆಳವಾಗಿ ಮೊಯಿಶ್ಚರೈಸ್ ಮಾಡುವುದು. ಇದರಿಂದ ಚರ್ಮವು ನಯ, ಮೃಧು ಮತ್ತು ಪೋಷಣೆಯನ್ನು ಪಡೆಯುವುದು. ಇದರಲ್ಲಿ ಇರುವ ಅಧಿಕ ಕೊಬ್ಬು ಮೊಯಿಶ್ಚರೈಸ್‌ನ್ನು ಕಾಪಾಡಿ, ಚರ್ಮ ಒಣಗುವುದನ್ನು ದೂರ ಮಾಡುವುದು.
ತುಪ್ಪದಲ್ಲಿ ಅಧಿಕ ಪ್ರಮಾಣದ ಆ್ಯಂಟಿಆಕ್ಸಿಡೆಂಟ್ ಆಗಿರುವ ವಿಟಮಿನ್ ಇ ಮತ್ತು ಬೆಟಾ ಕ್ಯಾರೋಟಿನ್ ಇದ್ದು, ಫ್ರೀ ರ್ಯಾಡಿಕಲ್ ನಿಂದಾಗಿ ಚರ್ಮಕ್ಕೆ ಆಗುವ ಹಾನಿಯಿಂದ ರಕ್ಷಣೆ ನೀಡುವುದು. ನಿಯಮಿತವಾಗಿ ತುಪ್ಪವನ್ನು ಮೊಯಿಶ್ಚರೈಸರ್ ಆಗಿ ಬಳಸಿಕೊಂಡರೆ ಆಗ ವಯಸ್ಸಾಗುವ ಲಕ್ಷಣಗಳನ್ನು ತಡೆದು ಯೌವನಯುತ ಕಾಂತಿ ನೀಡುವುದು.