ರಾಜ್ಯ ಸರ್ಕಾರವು ಜಾರಿ ತಂದಿರುವ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ರೈತರು ತಮ್ಮ ಭೂಮಿಯಲ್ಲಿ ನೀರಾವರಿ ವ್ಯವಸ್ಥೆ ಸುಧಾರಿಸಿಕೊಳ್ಳಲು ವಿಶೇಷ ಅವಕಾಶವೊಂದನ್ನು ನೀಡುತ್ತಿದೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಅಡಿಯಲ್ಲಿ 153. 53 ಲಕ್ಷ ಅನುದಾನವನ್ನು ಮಂಜೂರು ಮಾಡಲಾಗಿದ್ದು. ಈ ಯೋಜನೆಯಿಂದ ರೈತರು ಶೇ. 90ರಷ್ಟು ಅನುದಾನವನ್ನು ಪಡೆದು ಗರಿಷ್ಠ 2 ಹೆಕ್ಟೇರ್ ವರೆಗೆ ಭೂಮಿಯಲ್ಲಿ ನೀರಾವರಿ ವ್ಯವಸ್ಥೆ ಸಾಧಿಸಬಹುದಾಗಿದೆ.
ಈ ಯೋಜನೆಯಡಿ ಪರಿಶಿಷ್ಟ ಜಾತಿಯ ರೈತರು ಬೋರ್ ವೆಲ್ ಹಾಗೂ ಪಂಪ್ ಸೆಟ್ ಅಳವಡಿಸಿಕೊಳ್ಳಲು ಸಂಪೂರ್ಣ ಸಬ್ಸಿಡಿ ಸಹಿತ ಅನುದಾನ ಪಡೆಯಬಹುದು. ರೈತರಿಗೆ 1.5 ಲಕ್ಷರಿಂದ 3 ಲಕ್ಷ ರೂಪಾಯಿವರೆಗೆ ಬೋರ್ ವೆಲ್ ಸಾಲ ನೀಡಲಾಗುತ್ತದೆ. ರೈತರು ತೋಟಗಾರಿಕೆ ಇಲಾಖೆ ಕಛೇರಿಗೆ ತೆರಳಿ ಅರ್ಜಿ ಸಲ್ಲಿಸಬಹುದಾಗಿದೆ. ಪಂಪ್ ಸೆಟ್ ವಿದ್ಯುತ್ ಪೂರೈಕೆಗಾಗಿ 50,000 ರೂಪಾಯಿ ವರೆಗೆ ಸಾಲ ನೀಡಲಾಗುತ್ತದೆ. ಹತ್ತಿರದ ನದಿಗಳಿಂದ ನೀರಿನ ಪೈಪ್ ಲೈನ್ ಮೂಲಕ ನೀರಾವರಿ ಸೌಲಭ್ಯ ಒದಗಿಸಲಾಗುತ್ತದೆ.
ರೈತರ ಭೂಮಿ ಆಧಾರಿತ ಅನುದಾನ ಸಹ ಲಭ್ಯವಿದೆ. 8 ಎಕರೆ ಭೂಮಿ ಹೊಂದಿರುವ ರೈತರಿಗೆ 4 ಲಕ್ಷ ರೂಪಾಯಿ ಹಾಗೂ 15 ಎಕರೆ ಭೂಮಿ ಹೊಂದಿರುವವರಿಗೆ 6 ಲಕ್ಷ ರೂಪಾಯಿವರೆಗೆ ಸಂಪೂರ್ಣ ಸಬ್ಸಿಡಿ ನೀಡಲಾಗುತ್ತದೆ. ಇದರಿಂದ ರೈತರಿಗೆ ತಮ್ಮ ಕೃಷಿ ಚಟುವಟಿಕೆಗಳಿಗೆ ನಿರಂತರ ನೀರಾವರಿ ಸೌಲಭ್ಯ ದೊರೆಯುತ್ತದೆ.