SHIVAMOGGA : ಕಾಂತಾರ ಚಾಪ್ಟರ್-1 ತಂಡಕ್ಕೆ ಮತ್ತೊಂದು ಆಘಾತ | ಸಹನಟ ವಿಜು ವಿ.ಕೆ ಹೃದಯಾಘಾತದಿಂದ ನಿಧನ

SHIVAMOGGA NEWS : ಕಾಂತಾರ ಚಾಪ್ಟರ್- [KANTARA CHAPTER 1] ಚಿತ್ರತಂಡ ಮತ್ತೊಂದು ದುಃಖದ ಸಂಗತಿಯನ್ನು ಎದುರಿಸಿದೆ. ಚಲನಚಿತ್ರದ ಸಹಕಲಾವಿದ ಮತ್ತು ಪ್ರಸಿದ್ಧ ಮಿಮಿಕ್ರಿ ಕಲಾವಿದ ವಿಜು ವಿ.ಕೆ [Viju VK] ಅವರು ನೆನ್ನೆ ರಾತ್ರಿ ಹೃದಯಾಘಾತದಿಂದ [HEART ATTACK]  ತಮ್ಮ ಕೊನೆಯುಸಿರೆಳೆದಿದ್ದಾರೆ.

ಕೇರಳದ ತ್ರಿಶೂರ್ ಮೂಲದ ವಿಜು, ಶೂಟಿಂಗ್ ಸಂದರ್ಭವಾಗಿಯೇ ಆಗುಂಬೆ ಸಮೀಪದ ಯಡೂರಿನ ಹೋಂಸ್ಟೇನಲ್ಲಿ [HOME STAY] ತಂಗಿದ್ದರು. ಬುಧವಾರ ರಾತ್ರಿ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು, ತುರ್ತುವಾಗಿ ತೀರ್ಥಹಳ್ಳಿಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಮಾರ್ಗ ಮಧ್ಯೆ ವಿಜು ಅವರು ಕೊನೆಯುಸಿರೆಳೆದಿದ್ದಾರೆ.

ಸದ್ಯ ವಿಜು ಅವರ ಮೃತದೇಹ ತೀರ್ಥಹಳ್ಳಿಯ ಜೆ.ಸಿ ಆಸ್ಪತ್ರೆಗೆ [JC HOSPITAL] ಸ್ಥಳಾಂತರಿಸಲಾಗಿದೆ. ಅವರ ಕುಟುಂಬಸ್ಥರು ಕೇರಳದಿಂದ ಆಗಮಿಸುವ ನಿರೀಕ್ಷೆಯಲ್ಲಿದ್ದು, ಅಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಮನಾರ್ಹವಾಗಿ, ಮೇ ತಿಂಗಳಲ್ಲಿ ಇದೇ ಚಿತ್ರತಂಡದ ಕಲಾವಿದ ಹಾಗೂ ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿಯವರು [RAKESH POOJARY] ಸಹ ಹೃದಯಾಘಾತದಿಂದ ಅಕಾಲಿಕವಾಗಿ ಸಾವನ್ನಪ್ಪಿದ್ದರು. ಈ ಎರಡೂ ಘಟನೆಗಳು ಚಿತ್ರತಂಡದ ಮೇಲೆ ಆಘಾತಕಾರಿ ಪರಿಣಾಮ ಬೀರುತ್ತಿವೆ.

Author:

...
Keerthana J

Copy Editor

prajashakthi tv

share
No Reviews