ಶಿರಾ:
ಶಿರಾ ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ಮಂಗನಹಳ್ಳಿ ಗ್ರಾಮಮಕ್ಕೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡದೇ ಬೆಸ್ಕಾಂ ನಿರ್ಲಕ್ಷ್ಯ ತೋರುತ್ತಿದೆ ಎಂದು ಬೆಸ್ಕಾಂ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ರು. ಬೇಸಿಗೆ ಆರಂಭವಾಗ್ತಿದ್ದು, ಶಿರಾ ತಾಲೂಕಿನಲ್ಲಿ ಬಿಸಿಲಿನ ತಾಪದಿಂದ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳುವುದೇ ರೈತರಿಗೆ ದೊಡ್ಡ ಸವಾಲಾಗಿದೆ, ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಬೋರ್‌ವೆಲ್‌ಗಳ ಮೊರೆ ಹೋಗ್ತಾ ಇದ್ದಾರೆ. ಆದ್ರೆ ಬೆಳೆಗಳಿಗೆ ನೀರನ್ನು ಬಿಡೋಣ ಅಂದ್ರೆ ಸಮರ್ಪಕವಾಗಿ ಕರೆಂಟ್ ಕೊಡ್ತಾ ಇಲ್ಲ ಅಂತಾ ಗ್ರಾಮಸ್ಥರು ಆರೋಪ ಮಾಡ್ತಿದ್ದಾರೆ.
ಸಮಪರ್ಕವಾಗಿ ರೈತರಿಗೆ ವಿದ್ಯುತ್ ಪೂರೈಸುವಂತೆ ಹಲವು ಬಾರಿ ಮನವಿ ಮಾಡಿದ್ರು ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು, ಕರೆಂಟ್ ಪೂರೈಕೆ ಮಾಡುವಂತೆ ಆಗ್ರಹಿಸದಿರೋದ್ರಿಂದ ರೊಚ್ಚಿಗೆದ್ದ ಅನ್ನದಾತರು ಬುಕ್ಕಾಪಟ್ಟಣ ಬೆಸ್ಕಾಂ ಕಚೇರಿಗೆ ನೂರಾರು ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ರು. ಈ ವೇಳೆ ಅಧಿಕಾರಿಗಳಿಗೆ ರೈತರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡ್ರು. ಬರಗಾಲದಿಂದ ನಮ್ಮ ಬದುಕು ಮೂರಾಬಟ್ಟೆಯಾಗಿದೆ ಈ ನಡುವೆ ವಿದ್ಯುತ್ ಕಟ್ ಮಾಡಿ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ರೈತರು ಕಿಡಿಕಾರಿದ್ರು.
ಇನ್ನು, ಕಂಬದ ಹಳ್ಳಿ ರಸ್ತೆ ಬದಿಯಲ್ಲಿ ಜಮೀನು ಇದ್ದು ಅದಕ್ಕೆ ವಿದ್ಯುತ್ ಪೂರೈಕೆ ಮಾಡಲು ನಮ್ಮ ಮಂಗನಹಳ್ಳಿ ಭಾಗಕ್ಕೆ ಕಡಿತ ಮಾಡುತ್ತಾರೆ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ. ಕೆಲ ಬೆಳೆಗಳು ಫಸಲಿಗೆ ಬಂದಿದ್ದು ಈ ವೇಳೆ ಕರೆಂಟ್ ಕಟ್ ಮಾಡ್ತಾ ಇದ್ದು, ರೈತರಿಗೆ ಬೆಸ್ಕಾಂ ಬರೆ ಹಾಕ್ತಿದೆ ಎಂದು ಕಿಡಿಕಾರಿದ್ರು.
ಪ್ರತಿಭಟನೆ ಕಾವೇರುತ್ತಿದ್ದಂತೆ ಪೊಲೀಸರು ಮದ್ಯಪ್ರವೇಶಿಸಿ ರೈತರನ್ನು ಸಮಾಧಾನಪಡಿಸಿ ಉನ್ನತ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿ ತೀರ್ಮಾನಿಸುವ ಭರವಸೆ ನೀಡಿದ್ರು. ಪೊಲೀಸರು ಭರವಸೆ ಬೆನ್ನಲ್ಲೇ ರೈತರು ಪ್ರತಿಭಟನೆ ವಾಪಸ್ ಪಡೆದುಕೊಂಡ್ರು.