ಧಾರವಾಡ ಸಮೀಪದ ದೇವರ ಹುಬ್ಬಳ್ಳಿ ಗ್ರಾಮದ ರೈತ ಕುಟುಂಬದ ದಂಪತಿಗಳಾದ ಈಶ್ವರ ಆರೇರ್ [82] ಹಾಗೂ ಅವರ ಪತ್ನಿ ಪಾರ್ವತಿ ಆರೇರ್ [73] ಅವರು ಇಹಲೋಕ ತ್ಯಜಿಸಿದ್ದಾರೆ. ದಂಪತಿಗಳು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಪತ್ನಿ ಪಾರ್ವತಿ ಆರೇರ್ ಆರೈಕೆಯನ್ನು ಪತಿ ಈಶ್ವರ ಆರೇರ್ ಮತ್ತು ಮಕ್ಕಳು ಮಾಡುತ್ತಿದ್ದರು. ಭಾನುವಾರ ರಾತ್ರಿ ಊಟ ಮಾಡಿ ಮಲಗಿದ್ದ ದಂಪತಿಗಳು ಬೆಳಿಗ್ಗೆ ಏಳಲೇಇಲ್ಲ. ಏಳದೇ ಇದ್ದಾಗ ಕುಟುಂಬಸ್ಥರು ಎಬ್ಬಿಸಲು ನೋಡಿದ್ದಾರೆ. ಆಗ ಅವರ ಸಾವನ್ನಪ್ಪಿದ್ದರು. ಈ ಮೂಲಕ ಸಾವಿನಲ್ಲೂ ರೈತ ದಂಪತಿಗಳು ಒಂದಾಗಿದ್ದಾರೆ.ಸೋಮವಾರ ಬೆಳಗಿನ ಜಾವ ತಮ್ಮ ನಿವಾಸದಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ.
ದಾಂಪತ್ಯದಲ್ಲಿ ಅನ್ಯೋನ್ಯವಾಗಿದ್ದ ಹಿರಿಯ ಜೀವಗಳೆರಡು ಸಾವಿನಲ್ಲೂ ಒಂದಾಗಿದ್ದಾರೆ. ರೈತ ದಂಪತಿಗಳಿಗೆ ನಾಲ್ವರು ಹೆಣ್ಣು ಮಕ್ಕಳು ಮತ್ತು 12 ಮೊಮ್ಮಕ್ಕಳಿದ್ದಾರೆ. ಈ ದುರ್ಘಟನೆಯಿಂದ ಕುಟುಂಬಕ್ಕೆ ಆಘಾತವಾಗಿದೆ. ರಾತ್ರಿ ಕೂಡ ಇಬ್ಬರು ಒಟ್ಟಿಗೆ ಊಟ ಮಾಡಿ ನಗು ನಗುತ್ತಲೇ ಇದ್ದವರು, ಬೆಳಕಾಗುವಷ್ಟರಲ್ಲಿಯೇ ಇಹ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಬದುಕಿದ್ದಾಗಲೂ ಒಬ್ಬರನ್ನೊಬ್ಬರು ಬಿಟ್ಟು ಕ್ಷಣದ ಜೀವಗಳು ಸಾವಿನಲ್ಲೂ ಒಂದಾಗಿದ್ದಾರೆ. ವೃದ್ಧ ದಂಪತಿಗಳನ್ನು ನೆನೆದು ಇಡೀ ಗ್ರಾಮವೇ ಕಂಬನಿ ಮಿಡಿದಿದೆ.