MOVIE : ಬಾಲಯ್ಯ ಹುಟ್ಟುಹಬ್ಬದ ಪ್ರಯುಕ್ತ ಅಖಂಡ - 2 ಟೀಸರ್‌ ರಿಲೀಸ್‌

MOVIE NEWS : ನಂದಮೂರಿ ಬಾಲಕೃಷ್ಣ, ಜನಪ್ರಿಯವಾಗಿ ಬಾಲಯ್ಯ ಎಂದು ಕರೆಯಲ್ಪಡುವ ಸ್ಟಾರ್ ನಟ, ಮತ್ತೆ ತಮ್ಮ ಪ್ರಬಲ ಅಭಿನಯದಿಂದ ಅಭಿಮಾನಿಗಳ ಹೃದಯ ಗೆಲ್ಲಲು ಸಜ್ಜಾಗಿದ್ದಾರೆ. ಅವರ ಬಹು ನಿರೀಕ್ಷಿತ ಸಿನಿಮಾ ಅಖಂಡ-2 ಟೀಸರ್ ಇಂದು ರಿಲೀಸ್ ಆಗಿದೆ ̤ ಅದೂ ಕೇವಲ ಟೀಸರ್ ಅಲ್ಲ, ಅವರ 65ನೇ ಹುಟ್ಟುಹಬ್ಬದ ವಿಶೇಷ ಉಡುಗೊರೆಯಾಗಿದೆ.

ಅಖಂಡ-2 ಟೀಸರ್ ಕೇವಲ ಒಂದೇ ಅರ್ಧ ಕ್ಷಣದಲ್ಲಿ ಪ್ರೇಕ್ಷಕರ ಮನಸ್ಸು ಆವರಿಸಿಕೊಂಡಿದೆ. ನಂದಮೂರಿ ಬಾಲಕೃಷ್ಣ ಅಘೋರಿಯ ಭಯಾನಕ ರೂಪದಲ್ಲಿ ತೆರೆ ಮೇಲೆ ನಡೆದು ಬರುವ ದೃಶ್ಯ ನಿಜಕ್ಕೂ ರೋಮಾಂಚನ ಮೂಡಿಸುವಂತಿದೆ. ಈ ಪಾತ್ರದ ತೀವ್ರತೆ, ಬಾಲಯ್ಯನ ದೇಹಭಾಷೆ, ಶಕ್ತಿ, ಎಲ್ಲವೂ ನೋಡಿದ್ರೆ goosebumps ಬರೋದು ಖಂಡಿತ.

ಈ ಚಿತ್ರದ ನಿರ್ದೇಶಕರಾದ ಬೊಯಪಾಟಿ ಶ್ರೀನು  ಅವರು ಬಾಲಯ್ಯ ಜೊತೆ ಇತ್ತೀಚೆಗೆ ಮೂರು ಸೂಪರ್ ಹಿಟ್ ಸಿನಿಮಾಗಳನ್ನ ಮಾಡಿದ್ದಾರೆ: ಸಿಂಹ, ಲಿಜೆಂಡ್, ಮತ್ತು ಅಖಂಡ. ಈ ಮೂರು ಸಿನಿಮಾಗಳ ಜೋಡಿಯೇ ಈಗ ಮತ್ತೊಮ್ಮೆ ತಮ್ಮ ಮಂತ್ರದ ಮಹಿಮೆ ತೋರಿಸಲು ಸಜ್ಜಾಗಿದ್ದಾರೆ.

ಇನ್ನು ಅಖಂಡ – 2 ಚಿತ್ರದ ಶೂಟಿಂಗ್ ಪ್ರಸ್ತುತ ಜಾರ್ಜಿಯಾದ ಅದ್ಭುತ ಸ್ಥಳಗಳಲ್ಲಿ ನಡೆಯುತ್ತಿದೆ. ಸಂಗೀತ ಸಂಯೋಜನ ಮಾಡಿರುವವರು ಎಸ್.ಥಮನ್, ಛಾಯಾಗ್ರಹಣವನ್ನು ಹ್ಯಾಂಡಲ್ ಮಾಡುತ್ತಿದ್ದಾರೆ ಸಂತೋಷ್ ಡಿ, ಸಾಹಸ ದೃಶ್ಯಗಳಿಗೆ ರಾಮ್-ಲಕ್ಷ್ಮಣ್ ಅವರ ಶೌರ್ಯ ಇದೆ. ಇನ್ನು ಅಖಂಡ-2 ಸಿನಿಮಾ ಇದೇ ವರ್ಷ ರಿಲೀಸ್ ಆಗುತ್ತಿದೆ. ಸೆಪ್ಟೆಂಬರ್-೨೫ ರಂದು ಇದು ತೆರೆಗೆ ಬರ್ತಿದೆ.

Author:

...
Keerthana J

Copy Editor

prajashakthi tv

share
No Reviews