ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ನಟನೆಯ ಮೂಲಕವೇ ಜನಮನ ಗೆದ್ದಿರೋ ನಟ ಡಾಲಿ ಧನಂಜಯ್ ಅವರ ಮದುವೆ ಫೆಬ್ರವರಿ 16 ರಂದು ಮೈಸೂರಿನಲ್ಲಿ ನಡೆಯಲಿದೆ. ಡಾಲಿ ಧನಂಜಯ್ ಅವರು ತಮ್ಮ ಬಹುಕಾಲದ ಗೆಳತಿ ಧನ್ಯತಾ ಅವರನ್ನು ವಿವಾಹವಾಗಲಿದ್ದಾರೆ. ಡಾಲಿ ಹುಟ್ಟೂರಿನಲ್ಲಿ ಸರ್ಕಾರಿ ಶಾಲೆಗೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಸರ್ಕಾರಿ ಶಾಲೆಯ ಜೀರ್ಣೋದ್ಧಾರಕ್ಕೆ ಖುದ್ದು ಡಾಲಿ ಧನಂಜಯ ಅವರೇ ಮುಂದೆ ನಿಂತು ಕೆಲಸ ಮಾಡಿಸಿದ್ದರು. ಇದಲ್ಲದೇ ಸರ್ಕಾರಿ ಶಾಲೆಯ ಮಕ್ಕಳಿಗೆ ಬೇಕಾದ ಮೂಲಭೂತ ಸೌಕರ್ಯವನ್ನು ಒದಗಿಸಲು ಡಾಲಿ ಧನಂಜಯ ಮುಂದಾಗಿದ್ದರು.
ಮದುವೆ ಸಂಭ್ರಮದ ಜೊತೆಗೆ ತನ್ನ ಹುಟ್ಟೂರಿನ ಶಾಲೆಗೆ ನಟ ಡಾಲಿ ಧನಂಜಯ್ ಭೇಟಿ ನೀಡಿ, ಮಕ್ಕಳ ಜೊತೆ ಕಾಲ ಕಳೆದು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಡಾಲಿ ವಿಚಾರಿಸಿದ್ದಾರೆ. ಧನಂಜಯ್ ಅವರು ಅರಸೀಕೆರೆ ತಾಲೂಕು ಕಾಳೇನಹಳ್ಳಿ ಕೊಪ್ಪಲಿನ ಶಾಲೆಗೆ ಲಕ್ಷಾಂತರ ರೂ ಖರ್ಚು ಮಾಡಿ ಅಭಿವೃದ್ದೀ ಮಾಡಿಸಿ, ಶಾಲೆಗೆ ಹೈಟೆಕ್ ಟಚ್ ನೀಡಿದ್ದಾರೆ.
ಹುಟ್ಟೂರಿನಲ್ಲಿ ದೇವರ ಕಾರ್ಯದ ನಡುವೆ ಡಾಲಿ ಶಾಲೆ ಭೇಟಿ ನೀಡಿದ್ದಾರೆ. ಈ ಶಾಲೆಯಲ್ಲಿ 86 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಡಾಲಿಯನ್ನು ಕಂಡು ಮಕ್ಕಳು ಫುಲ್ ಖುಷಿಯಾಗಿದ್ದಾರೆ.