ಕೊಪ್ಪಳ : ಬಾಲಕಿಗೆ ಲೈಂಗಿಕ ಕಿರುಕುಳ | ಆರೋಪಿ ಬಂಧನ

ಕೊಪ್ಪಳ:

ಬೇಕರಿಗೆ ಬಂದ 6 ವರ್ಷದ ಬಾಲಕಿಗೆ ಚಾಕೊಲೇಟ್‌ ತೋರಿಸಿ ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿರುವಂತಹ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ನಡೆದಿದೆ. ಕೇರಳ ಮೂಲದ ಮಹಮ್ಮದ್‌ ಕುಟ್ಟಿ ಎಂಬಾತ ಈ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ.

ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಕೇರಳ ಮೂಲದವರ ಬೇಕರಿಯೊಂದರಲ್ಲಿ ಈ ಘಟನೆ ನಡೆದಿದ್ದು, ಇನ್ನು ಇದರ ಬಗ್ಗೆ ಬಾಲಕಿ ಮನೆಗೆ ಹೋಗಿ ತನ್ನ ಪೋಷಕರಿಗೆ ತಿಳಿಸಿದ್ದಾಳೆ. ವಿಷಯ ತಿಳಿಯುತ್ತಿದ್ದಂತಯೇ ಸಂಬಂಧಿಕರು, ಸಾರ್ವಜನಿಕರು ಬೇಕರಿಗೆ ನುಗ್ಗಿ ಆರೋಪಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಲ್ಲದೇ ಬೇಕರಿಯನ್ನು ಕೂಡ ಲಾಕ್ ಮಾಡಿಸಿದ್ದಾರೆ. ಸದ್ಯ ಕೊಪ್ಪಳ ಜಿಲ್ಲೆಯ ಕಾರಟಗಿ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಆರೋಪಿ ಮೊಹಮ್ಮದ್ ಕುಟ್ಟಿ ಯನ್ನು ಬಂಧಿಸಿದ್ದಾರೆ

Author:

share
No Reviews