MOVIE: ಅಭಿನಯ ಚಕ್ರವರ್ತಿ ನಟನೆಯ ಬಿಲ್ಲಾ ರಂಗ ಬಾಷಾ ಸಿನಿಮಾ ಶೂಟಿಂಗ್‌ ಶುರು

ನಟ ಕಿಚ್ಚ ಸುದೀಪ್‌ ಅಭಿನಯದ ಬಹಿನಿರೀಕ್ಷಿತ ಬಿಲ್ಲಾ ರಂಗ ಬಾಷಾ ಸಿನಿಮಾದ ಚಿತ್ರೀಕರಣವು ಇಂದಿನಿಂದ ಆರಂಭಗೊಂಡಿದೆ. ಇನ್ನು ಬಿಲ್ಲಾ ರಂಗ ಬಾಷಾ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌  ರಿಲೀಸ್‌ ಆಗಿದೆ.

ಸಿನಿಮಾ ಕುರಿತು ಸುದೀಪ್‌ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟನ್ನು ಹಂಚಿಕೊಂಡಿದ್ದಾರೆ. 2209 AD BRB first blood ಎಂದು ಸಿನಿಮಾಗೆ ಟೈಟಲ್‌ ಇಡಲಾಗಿದೆ. ಪೋಸ್ಟರ್‌ನಲ್ಲಿ ಸುದೀಪ್ ಜಬರ್ದಸ್ತ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ಎರಡು ಚಾಪ್ಟರ್‌ಗಳಲ್ಲಿ ಬಿಲ್ಲಾ ರಂಗ ಬಾಷಾ ಸಿನಿಮಾ ತೆರೆಗೆ ಬರಲಿದ್ದು, ಮೊದಲ ಚಾಪ್ಟರ್‌ಗೆ ಫಸ್ಟ್‌ ಬ್ಲಡ್‌ ಎಂದು ಚಿತ್ರತಂಡ ಕರೆದಿದೆ. ಈ ಚಿತ್ರವನ್ನು ಅನೂಪ್‌ ಭಂಡಾರಿ ನಿರ್ದೇಶನ ಮಾಡುತ್ತಿದ್ದು, ಪ್ಯಾನ್‌ ಇಂಡಿಯಾ ಚಿತ್ರ ಇದಾಗಿದೆ.

 

Author:

...
Shabeer Pasha

Managing Director

prajashakthi tv

share
No Reviews