ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಗಾಳಿ ಮಳೆಯ ಅಬ್ಬರದ ಮಧ್ಯೆ ದುರಂತ ಘಟನೆಯೊಂದು ನಡೆದಿದೆ. ಕೊಪ್ಪ ತಾಲೂಕಿನ ಭೈರೇದೇವರು ಗ್ರಾಮದಲ್ಲಿ ಭಾರಿ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗಿದ್ದ ವೇಳೆ, ಒಂದು ದೊಡ್ಡ ಮರ ಆಟೋವೊಂದರ ಮೇಲೆ ಉರುಳಿದ್ದು, ಚಾಲಕ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಸಂಭವಿಸಿದೆ.
ಇನ್ನು ಮೃತ ಚಾಲಕನನ್ನು ಸ್ಥಳೀಯ ವ್ಯಕ್ತಿ ರತ್ನಾಕರ್ ಎಂದು ಗುರುತಿಸಲಾಗಿದೆ. ಮರ ಉರುಳಿ ಬಿದ್ದ ಪರಿಣಾಮ ಆಟೋ ಸಂಪೂರ್ಣ ಜಖಂಗೊಂಡಿದ್ದು, ರತ್ನಾಕರ್ ಸಿಲುಕಿದ ಕಾರಣ ಜೀವ ಹಾನಿಗೆ ಕಾರಣವಾಗಿದೆ. ಘಟನೆ ನಡೆದ ಸ್ಥಳ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದೆ.
ಜಿಲ್ಲೆಯಲ್ಲಿ ಗಾಳಿ ಮಳೆಯ ಅಬ್ಬರ ಮುಂದುವರೆದಿದ್ದು, ಹವಾಮಾನ ಇಲಾಖೆಯ ಪ್ರಕಾರ ಮೇ 26 ರಂದು ಸಹ ಮಳೆಯ ನಿರೀಕ್ಷೆಯಿದೆ. ಇದಕ್ಕೂ ಮೊದಲು, ಮೇ 6 ರಂದು ಕಲ್ಲತ್ತಿಗಿರಿ ಪ್ರದೇಶದಲ್ಲಿ 100 ವರ್ಷಗಳ ಹಿಂದಿನ ಬೃಹತ್ ಅರಳಿ ಮರ ಧರೆಗುರುಳಿತ್ತು. ಈ ಸಂದರ್ಭದಲ್ಲಿ ಆಟೋ ಮತ್ತು ಕಾರು ಜಖಂಗೊಂಡಿದ್ದವು. ಆಟೋ ಚಾಲಕನ ಕೈ ಮುರಿದ ಘಟನೆ ಆಗಿತ್ತು.
ಪ್ರಸ್ತುತ ಜಿಲ್ಲೆಯಲ್ಲಿ ಪ್ರಕೃತಿವಿಕೋಪದಿಂದಾದ ಅಪಾಯಗಳನ್ನು ತಪ್ಪಿಸಲು ಸಾರ್ವಜನಿಕರು ಜಾಗ್ರತೆ ವಹಿಸಲು ಅಧಿಕಾರಿಗಳು ಸಲಹೆ ನೀಡಿದ್ದಾರೆ.