ಪಾವಗಡ:
ಪಾವಗಡ ತಾಲ್ಲೂಕಿನ ಕಣಿವೆನಹಳ್ಳಿ ಗ್ರಾಮದ ಹಠವಾದಿ ರೈತ ಸುರೇಶ್ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಶೇಂಗಾ ಬೆಳೆದು ಉತ್ತಮ ಫಲಿತಾಂಶವನ್ನು ಸಾಧಿಸಿದ್ದಾರೆ. ತಾಲೂಕಿನಲ್ಲಿ ಮಳೆ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿರುವ ಅನೇಕ ರೈತರಿಗೆ ಸುರೇಶ್ ಅವರ ಸಾಧನೆ ಪ್ರೇರಣೆಯಾಗಿದೆ.
ಸುರೇಶ್ ಅವರು 19 ಕೊಳವೆ ಬೊರ್ ವೆಲ್ ಗಳನ್ನು ಕೊರೆಸಿ ಉತ್ತಮ ಬೆಳೆ ಬೆಳೆಸುವ ಹಠದಿಂದ ಶೇಂಗಾ ಬೆಳೆದು ಯಶಸ್ಸು ಕಂಡಿದ್ದಾರೆ. ಒಂದು ಗಿಡಕ್ಕೆ 50 ರಿಂದ 60 ಶೇಂಗಾ ಬಿಡುತ್ತಿದ್ದು, ಇದರಿಂದ ರೈತನ ಮುಖದಲ್ಲಿ ಸಂತೋಷ ಕಾಣಿಸುತ್ತಿದೆ. ಆದರೆ ಈ ತಾಲೂಕಿನಲ್ಲಿ ಮಳೆ ಕೊರತೆಯಿಂದ ಅನೇಕ ರೈತರು ಸಾಲಪಾಲ ಮಾಡಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಸೋಲಾರ್ ಘಟಕಗಳನ್ನು ನಿರ್ಮಿಸುವುದಕ್ಕಾಗಿ ಹಲವು ರೈತರು ತಮ್ಮ ಜಮೀನುಗಳನ್ನು ನೀಡಿ ಅಲ್ಪಸ್ವಲ್ಪ ನೆಮ್ಮದಿಯನ್ನು ಪಡೆಯುತ್ತಿದ್ದಾರೆ.
ಸುತ್ತಲೂ ಬೆಟ್ಟಗುಡ್ಡಗಳೇ ಇರುವುದರಿಂದ ರಾತ್ರಿ ವೇಳೆ ಸರಿಯಾಗಿ ವಿದ್ಯುತ್ ಪೂರೈಕೆ ಇಲ್ಲದಿರುವುದರಿಂದ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಕಾಡುಪ್ರಾಣಿಗಳು ಹಾಳು ಮಾಡುತ್ತಿರುತ್ತವೇ. ಹೀಗಾಗಿ ರೈತರು ಬೆಳೆ ಬೆಳೆಯಲು ದೊಡ್ಡ ಸವಾಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವು ರೈತರ ಬೆಳೆಗಳಿಗೆ ಬೆಂಬಲ ಬೆಲೆ ಒದಗಿಸಿ ಸರಿಯಾದ ರೀತಿಯಲ್ಲಿ ವಿದ್ಯುತ್ ಪೂರೈಕೆ ಮಾಡಿ ಕಾಡುಪ್ರಾಣಿಗಳ ಸಮಸ್ಯೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ, ಕಣಿವೆನಹಳ್ಳಿ ಗ್ರಾಮದ ಅಶ್ವತಪ್ಪ, ಮಾಜಿ ಪಂಚಾಯತ್ ಸದಸ್ಯ ಗೋವಿಂದಪ್ಪ, ಮಂಜುನಾಥ್, ಸಣ್ಣೀರಪ್ಪ, ಅಶ್ವಥ್ ನಾರಾಯಣ್ ಮತ್ತು ಇತರರು ಉಪಸ್ಥಿತರಿದ್ದರು.