ಪಾವಗಡ: ಡೆಂಘಿ ಮಾರಿಗೆ 7 ವರ್ಷದ ಬಾಲಕ ಬಲಿ | ವೈದ್ಯರ ನಿರ್ಲಕ್ಷ್ಯ ಆರೋಪ

ಡೆಂಘಿ ಜ್ವರಕ್ಕೆ ಬಲಿಯಾದ ಬಾಲಕ ಕರುಣಾಕರ್‌ (7)
ಡೆಂಘಿ ಜ್ವರಕ್ಕೆ ಬಲಿಯಾದ ಬಾಲಕ ಕರುಣಾಕರ್‌ (7)
ತುಮಕೂರು

ಪಾವಗಡ:

ರಾಜ್ಯದಲ್ಲಿ ಬೇಸಿಗೆ ಆರಂಭವಾಗ್ತಿದ್ದು, ವೈರಲ್‌ ಫೀವರ್ ಜೊತೆಗೆ ಇದೀಗ ಡೆಂಘಿ ಜ್ವರ ವಕ್ಕರಿಸಿದ್ದು, 7 ವರ್ಷದ ಬಾಲಕ ಡೆಂಘಿ ಮಾರಿಗೆ ಬಲಿಯಾಗಿದ್ದಾನೆ. ತುಮಕೂರು ಜಿಲ್ಲೆ ಪಾವಗಡ ಪಟ್ಟಣದ ಬಾಬಯ್ಯನ ಗುಡಿಬೀದಿಯ ಹರೀಶ್‌ ಕುಮಾರ್‌ ಎಂಬುವವರ ಪುತ್ರ ಕರುಣಾಕರ್‌ ಡೆಂಘಿ ಜ್ವರಕ್ಕೆ ಮೃತಪಟ್ಟ ಬಾಲಕನಾಗಿದ್ದಾನೆ. ಡೆಂಘಿಯಿಂದ ಬಾಲಕ ಸಾವನ್ನಪ್ಪಿದ್ದಕ್ಕೆ ಪಾವಗಡದಲ್ಲಿ ಆತಂಕ ಹೆಚ್ಚಾಗಿದೆ.

ಜ್ವರ ಬಂದ ಹಿನ್ನೆಲೆ ಪಾವಗಡದ ಸುಧಾ ಕ್ಲಿನಿಕ್‌ನಲ್ಲಿ ಬಾಲಕ ಕರುಣಾಕರ್ ಕಳೆದ 7 ದಿನದಿಂದ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಉಸಿರು ಚೆಲ್ಲಿದ್ದಾನೆ. ಆದರೆ ಬಾಲಕ ಮೃತಪಡುವ ಕೊನೆ ಕ್ಷಣದವರೆಗೂ ಆತನಿಗೆ ಡೆಂಘಿ ಜ್ವರ ಇತ್ತು ಎಂದೇ ಪೋಷಕರಿಗೆ ಗೊತ್ತಿಲ್ಲವಂತೆ, ಹೀಗಾಗಿ ವೈದ್ಯರ ನಿರ್ಲಕ್ಷ್ಯವೇ ಮಗನ ಸಾವಿಗೆ ಕಾರಣ ಎಂದು ಪೋಷಕರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ಮಗನನ್ನು ಕಳೆದುಕೊಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ವೈದ್ಯರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಆಸ್ಪತ್ರೆಯಲ್ಲಿ ಕೆಲ ಕಾಲ ಗೊಂದಲದ ವಾತಾವರಣ ಉಂಟಾಯಿತು.

ಈ ಸಂಬಂಧ ಪಾವಗಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುಂತೆ ಪೋಷಕರು ಆಗ್ರಹಿಸಿದರು.

 

Author:

share
No Reviews