ಪಾವಗಡ : ಪಾವಗಡದ ಸೋಲಾರ್ ಪಾರ್ಕ್ ನಲ್ಲಿ ಸ್ಪೋಟ ಪ್ರಕರಣ... 6 ಮಂದಿ ಬಂಧನ

ಸ್ಥಳಕ್ಕೆ ಎಸ್‌ಪಿ ಅಶೋಕ್‌ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವುದು.
ಸ್ಥಳಕ್ಕೆ ಎಸ್‌ಪಿ ಅಶೋಕ್‌ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವುದು.
ತುಮಕೂರು

ಪಾವಗಡ:

ಪಾವಗಡ ತಾಲೂಕಿನ ತಿರುಮಣಿ ಬಳಿಯ ಸೋಲಾರ್‌ ಪಾರ್ಕ್‌ನ ನಿರ್ಮಾಣದ ಜಾಗದಲ್ಲಿ ಸಂಭವಿಸಿದ ಬ್ಲ್ಯಾಸ್ಟ್‌ನಿಂದಾಗಿ ಸ್ಥಳದಲ್ಲೇ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಮತ್ತೋರ್ವ ಕಾರ್ಮಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ದುರಂತದಲ್ಲಿ ಕಾರ್ಮಿಕರು ಸಾವನ್ನಪ್ಪಿದ ಹಿನ್ನೆಲೆ ಸ್ಥಳಕ್ಕೆ ಎಸ್‌ಪಿ ಅಶೋಕ್‌ ಭೇಟಿ ನೀಡಿ ಪರಿಶೀಲನೆ ನಡೆಸಿ ಆರು ಜನರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿಕೊಂಡಿದ್ದು, ಆರೋಪಿಗಳನ್ನು  ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಹೆಚ್ಚಿನ ತನಿಖೆಗೆ ಎಸ್‌ಪಿ ಆದೇಶ ನೀಡಿದ್ದಾರೆ.

ಇನ್ನು ಬೆಟ್ಟವನ್ನು ಬ್ಲ್ಯಾಸ್ಟ್‌ ಮಾಡಲು ಜಿಲೆಟಿನ್‌ನನ್ನು ಬಳಸಿಕೊಂಡಿದ್ದರಿಂದ ದುರಂತ ಸಂಭವಿಸಿದೆ ಎಂದು ಶಂಕಿಸಲಾಗಿದ್ದು, ಘಟನೆ ನಡೆದ ಸ್ಥಳದಲ್ಲಿದ್ದ 54 ಜಿಲೆಟಿನ್ ಕಡ್ಡಿಗಳನ್ನು ವಶಕ್ಕೆ ಪೊಲೀಸರು ಪಡೆದಿದ್ದಾರೆ. ಸ್ಪೋಟಕ ವಸ್ತುಗಳ ಬಳಕೆ ಕಾನೂನುಬಾಹಿರ ಎಂಬುದು ಗೊತ್ತಿದ್ದರು ಸಹ ಕಾನೂನು ಉಲ್ಲಂಘನೆ ಮಾಡಿ ಕೆಲಸ ಮಾಡುತ್ತಿರುವುದು ಕಂಡುಬಂದಿದೆ. ಹಾಗೂ ಇದರಲ್ಲಿ ಸರ್ಕಾರಿ ಅಧಿಕಾರಿಗಳು ಶಾಮಿಲ್‌ ಅಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಪೊಲೀಸರು ಹೆಚ್ಚಿನ ಕಾಳಜಿ ವಹಿಸಿ ತನಿಖೆಗೆ ಮುಂದಾಗಿದ್ದಾರೆ. ಬಂಡೆ ಸ್ಫೋಟಕ್ಕೆ ಅಧಿಕಾರಗಳ ನಿರ್ಲಕ್ಷ್ಯವೇ ಕಾರಣ ಎಂಬುದಾಗಿ ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ.  KSPSCL Aee ಮಹೇಶ್‌ ಕಾನೂನು ಬಾಹಿರ ಚಟುವಟಿಕೆ ನಡೆಸಿರೋದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಅವರ ತಲೆದಂಡವಾಗುತ್ತಾ ಎಂದು ಕಾದುನೋಡಬೇಕಿದೆ.

Author:

share
No Reviews