HEALTH TIPS:
ಕೊಬ್ಬರಿ ಎಣ್ಣೆಯಲ್ಲಿ ಆರೋಗ್ಯಕರ ಕೊಬ್ಬಿನ ಅಂಶ ಇರುವುದರಿಂದ ಕೂದಲು, ಚರ್ಮ ಸೇರಿದಂತೆ ಹಲವು ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
*ಹಳದಿ ಹಲ್ಲುಗಳಿಗೆ ಕೊಬ್ಬರಿ ಎಣ್ಣೆ ಮತ್ತು ಅರಿಶಿನ
ನಿಮ್ಮ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುತ್ತಿದ್ದರೆ ವಾರಕ್ಕೆ ಎರಡು ಬಾರಿ ಕೊಬ್ಬರಿ ಎಣ್ಣೆಗೆ ಅರಿಶಿನ ಬೆರೆಸಿದ ಮಿಶ್ರಣದಿಂದ ಹಲ್ಲುಗಳನ್ನು ಸ್ವಚ್ಛಗೊಳಿಸಿ. ಒಂದು ಚಿಟಿಕೆ ಅರಿಶಿನವನ್ನು ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿ, ಈ ಮಿಶ್ರಣವನ್ನು ನಿಮ್ಮ ಬ್ರಷ್‌ಗೆ ಹಚ್ಚಿ, ಅದರಿಂದ ನಿಮ್ಮ ಹಲ್ಲುಗಳನ್ನು ಉಜ್ಜಿ. ವಾರಕ್ಕೆ ಎರಡು ಬಾರಿ ಈ ರೀತಿ ಮಾಡಿದರೆ. ಬಹುಬೇಗ ಇದರ ಫಲಿತಾಂಶ ನಿಮಗೆ ಸಿಗಲಿದೆ.
*ಡಾರ್ಕ್ ಸರ್ಕಲ್‌ಗೆ ಕೊಬ್ಬರಿ ಎಣ್ಣೆ ಮತ್ತು ಕಾಫಿ ಪೌಡರ್
ಕಣ್ಣಿನ ಕೆಳಗಿರುವ ಡಾರ್ಕ್ ಸರ್ಕಲ್ ತೆಗೆದುಹಾಕಲು ಕಾಫಿ ಮತ್ತು ಕೊಬ್ಬರಿ ಎಣ್ಣೆಯನ್ನು ಬಳಸುವುದು ಬಹಳ ಪ್ರಯೋಜನಕಾರಿಯಾಗಿದೆ. ಈ ಪ್ರಯೋಜನವನ್ನು ಪಡೆಯಲು ಮೊದಲಿಗೆ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಕಾಫಿ ಪಡಿಯನ್ನು ಬೆರೆಸಿ. ಈಗ ಪ್ರತಿ ರಾತ್ರಿ ಮಲಗುವ ಮುನ್ನ ಅದನ್ನು ಕಣ್ಣುಗಳ ಸುತ್ತಲೂ ಹಚ್ಚಿ. 2 ನಿಮಿಷಗಳ ಕಾಲ ಮಸಾಜ್ ಮಾಡಿ. ನೀವು ಅದರ ಪರಿಣಾಮವನ್ನು ಬಹಳ ಬೇಗ ಕಂಡುಕೊಳ್ಳುವಿರಿ. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಡಾರ್ಕ್ ಸರ್ಕಲ್ ತೆಗೆದುಹಾಕಲು ಸಹಾಯ ಮಾಡುತ್ತದೆ.
*ಗುಲಾಬಿ ಬಣ್ಣದ ತುಟಿಗಳಿಗೆ ಕೊಬ್ಬರಿ ಎಣ್ಣೆ ಮತ್ತು ಸಕ್ಕರೆ
ಕೊಬ್ಬರಿ ಎಣ್ಣೆಯ ಈ ಬಳಕೆಯು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ನೀವು ಮಾಡಬೇಕಾಗಿರುವುದಷ್ಟೇ, ಒಂದು ಟೀ ಚಮಚ ಕೊಬ್ಬರಿ ಎಣ್ಣೆಗೆ ಸ್ವಲ್ಪ ಸಕ್ಕರೆಯನ್ನು ಬೆರೆಸಿ. ನಂತರ ಇದನ್ನು ನಿಮ್ಮ ತುಟಿಗಳಿಗೆ ಹಚ್ಚಿ ಸ್ಕ್ರಬ್ ಮಾಡಿ. ಇದು ತುಟಿಗಳ ಮೇಲಿನ ಸತ್ತ ಜೀವಕೋಶಗಳನ್ನು ಸ್ವಚ್ಛಗೊಳಿಸಿ, ತುಟಿಗಳ ಹೈಡೇಟ್ ಆಗಿರಿಸುತ್ತದೆ. ನಂತರ ಪಿಂಕ್ ಕಲರ್ ಲಿಪ್ ಪಡೆಯಲು ಸಹಾಯ ಮಾಡುತ್ತದೆ
*ಬಿರುಕು ಬಿಟ್ಟ ಹಿಮ್ಮಡಿಗಳಿಗೆ ಅಲೋವೆರಾ ಮತ್ತು ಕೊಬ್ಬರಿ ಎಣ್ಣೆ
ಬಿರುಕು ಬಿಟ್ಟ ಹಿಮ್ಮಡಿಗಳಿಗೆ ನೀವು ಅಲೋವೆರಾ ಮತ್ತು ಕೊಬ್ಬರಿ ಎಣ್ಣೆಯನ್ನು ಬಳಸಬಹುದು. ಇದಕ್ಕಾಗಿ ನೀವು ಮಾಡಬೇಕಾಗಿರುವುದೇನೆಂದರೆ ಒಂದು ಚಮಚ ಅಲೋವೆರಾ ಜೆಲ್‌ಗೆ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಬೆರೆಸಿ ನಂತರ ಅದನ್ನು ನಿಮ್ಮ ಹಿಮ್ಮಡಿಯ ಮೇಲೆ ಹೆಚ್ಚಿ. ಪ್ರತಿ ರಾತ್ರಿ ಮಲಗುವ ಮುನ್ನ ಇದೇ ರೀತಿ ಮಾಡಿ. ಬಯಸಿದಲ್ಲಿ ನೀವು ಅದನ್ನು ಡಬ್ಬಿಯಲ್ಲಿ ಸಂಗ್ರಹಿಸಿ ದೀರ್ಘಕಾಲ ಬಳಸಬಹುದು. ಇದು ನಿಮ್ಮ ಹಿಮ್ಮಡಿಗಳು ಬಿರುಕು ಬಿಡುವುದನ್ನು ತಡೆಯುತ್ತದೆ ಮತ್ತು ಅವುಗಳ ಗುಣಪಡಿಸುವಿಕೆಗೆ ಸಹಾಯ ಮಾಡುತ್ತದೆ.
*ಕೂದಲಿನ ಬೆಳವಣಿಗೆಗೆ ಕೊಬ್ಬರಿ ಎಣ್ಣೆ ಮತ್ತು ಈರುಳ್ಳಿ
ಕೂದಲಿನ ಬೆಳವಣಿಗೆಗೆ ಈರುಳ್ಳಿ ಮತ್ತು ಕೊಬ್ಬರಿ ಎಣ್ಣೆ ಬಳಸುವುದು ಯಾವಾಗಲೂ ಪ್ರಯೋಜನಕಾರಿ ಎಂಬುದು ಸಾಬೀತಾಗಿದೆ. ಆದ್ದರಿಂದ ನೀವು ಈರುಳ್ಳಿ ರಸವನ್ನು ಹೊರತೆಗೆದು ಅದಕ್ಕೆ ಕೊಬ್ಬರಿ ಎಣ್ಣೆಯನ್ನು ಮಿಶ್ರಣ ಮಾಡಿ. ಈ ಎರಡನ್ನೂ ಬೆರೆಸಿದ ನಂತರ, ಅದನ್ನು ನಿಮ್ಮ ಕೂದಲಿಗೆ ಹಚ್ಚಿ. ಇದು ಕೂದಲಿನಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ, ಕೂದಲು ವೇಗವಾಗಿ ಬೆಳೆಯುತ್ತದೆ̤