ಕೋಲಾರ ಜಿಲ್ಲೆ ಮುಳಬಾಗಿಲು ನಗರದ ಪ್ರವಾಸಿ ಮಂದಿರದ ಬಳಿ ಭಾನುವಾರ ಮಧ್ಯರಾತ್ರಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಈ ಹಿನ್ನೆಲೆ ಪೀಠೋಪಕರಣದ ಅಂಗಡಿ ಮತ್ತು ಗೋಡೌನ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು,ಡಿಲಕ್ಸ್ ಎಂಟರ್ಪ್ರೈಸ್ ಫರ್ನಿಚರ್ ಅಂಗಡಿ ಹೊತ್ತಿ ಉರಿದಿದೆ. ಮುಳಬಾಗಲು ನಗರದ ಶೌಕತ್ ಎಂಬುವವರಿಗೆ ಸೇರಿದ ಫರ್ನಿಚರ್ ಅಂಗಡಿ ಹಾಗೂ ಗೋಡೌನ್‌ನಲ್ಲಿದ್ದ ಸುಮಾರು ಒಂದೂವರೆ ಕೋಟಿ ರೂ. ಮೌಲ್ಯದ ವಸ್ತುಗಳು ಸಂಪೂರ್ಣ ಸುಟ್ಟುಹೋಗಿದೆ.
ಸ್ಥಳಕ್ಕೆ ಆಗಮಿಸಿದ ಆಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಪೀಠೋಪಕರಣಗಳು ಒಂದೇ ಸಮ ಹೊತ್ತಿ ಉರಿದ ಹಿನ್ನೆಲೆ ಮೂರು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕೆಲಸ ನಡೆಸಲಾಯಿತು. ಇನ್ನು ಘಟನಾ ಸ್ಥಳಕ್ಕೆ ಸ್ಥಳಕ್ಕೆ ಮುಳಬಾಗಿಲು ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.