Cottonpete ಯಲ್ಲಿ ವಾಲಿದ ಬೃಹತ್ ಕಟ್ಟಡ – ಒಳಗೆ ಸಿಲುಕಿದ್ದವರ ರಕ್ಷಣೆ

ರಾಜಧಾನಿ ಬೆಂಗಳೂರಿನ ಕಾಟನ್ಪೇಟೆಯಲ್ಲಿ (Cottonpete) ಬೃಹತ್ ಕಟ್ಟಡವೊಂದು ಏಕಾಏಕಿ ಒಂದು ಬದಿಗೆ ವಾಲಿದ್ದು, ಕಟ್ಟಡದ ಸುತ್ತಮುತ್ತಲಿನ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಇನ್ನು ಕಟ್ಟಡದೊಳಗೆ ಸಿಲುಕಿದ್ದ ಇಬ್ಬರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಇದನ್ನು ಓದಿ : Devadurga ದಲ್ಲಿ ಕಟ್ಟಡ ಮೇಲ್ಛಾವಣಿ ಕುಸಿತ- ಮೂವರು ಯುವಕರ ಸಾವು

ಪಾರ್ಕ್ ಮಾಡಿದ್ದ ಆಟೋ ಜಖಂ
ಈ ಕಟ್ಟಡದಲ್ಲಿ ಖಾಸಗಿ ಕ್ಲಿನಿಕ್ ಕಾರ್ಯನಿರ್ವಹಿಸುತ್ತಿತ್ತು. ಕಟ್ಟಡ ವಾಲಿದ ಪರಿಣಾಮ ಅದರ ಒಂದು ಭಾಗ ರಸ್ತೆಯತ್ತ ಜಾರಿದ್ದು, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಆಟೋಗೆ ಹಾನಿಯಾಗಿದೆ.
ಅಪಾಯ ತಪ್ಪಿಸಲು ಮುನ್ನೆಚ್ಚರಿಕಾ ಕ್ರಮ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿಯ ಪರಿಶೀಲನೆ ನಡೆಸಿದರು. ಕಟ್ಟಡವನ್ನು ಸುರಕ್ಷಿತವಾಗಿ ತೆರವುಗೊಳಿಸುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದು, ಹೆಚ್ಚಿನ ಅಪಾಯ ತಪ್ಪಿಸಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಇದನ್ನು ನೋಡಿ : ನನ್ನ ತಲೇಲಿ ಕೂದಲು ಉದುರಿದ್ಯಂತೆ ಏನ್ಮಾಡೋದು ನಗುತ್ತಲೇ ಹೀಗ್ಯಾಕಂದ್ರುHDK.?




