Kerala|ಕೊಟ್ಟಿಯೂರು ದೇವಸ್ಥಾನಕ್ಕೆ ಹೋಗೋಕು ಮುನ್ನ ಎಚ್ಚರ – ವೈರಲ್ ಟೆಂಪಲ್ ನ ಅಸಲಿ ಸತ್ಯ ಬಿಚ್ಚಿಟ್ಟ ಕನ್ನಡಿಗರು.

ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ಟ್ರೆಂಡಿಂಗ್ ಆಗಿರುವ ಕೇರಳದ ಕೊಟ್ಟಿಯೂರು ದೇವಾಲಯಕ್ಕೆ ಕರ್ನಾಟಕ ರಾಜ್ಯದಿಂದ ಲಕ್ಷಾಂತರ ಭಕ್ತರು ತೆರಳುತ್ತಿದ್ದು,ಇದೀಗ ಕೊಟ್ಟಿಯೂರು ದೇವಾಲಯದಲ್ಲಿನ ಅವ್ಯವಸ್ಥೆಗೆ ಭಕ್ತರು ಹೈರಾಣಾಗಿದ್ದಾರೆ.

ಬಹುತೇಕ ಕನ್ನಡಗರೇ ಈ ದೇವಾಲಯಕ್ಕೆ ಭೇಟಿ
ಬಹುತೇಕ ಕನ್ನಡಿಗರೇ ಹೆಚ್ಚಾಗಿ ತೆರಳುತ್ತಿರೋ ಕೊಟ್ಟಿಯೂರಿನ ಮಹಾಶಿವನ ದೇವಾಲಯದಲ್ಲಿ ಕನ್ನಡಿಗರ ಮೇಲೆ ದರ್ಪ ನಡೆದಿದ್ದು,ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ನೆಗೆಟೀವ್ ವೈರಲ್ ಆಗುತ್ತಿದೆ. ಕೇರಳಂ ರಾಜ್ಯದ ಕಣ್ಣೂರು ಜಿಲ್ಲೆಯಲ್ಲಿರುವ ಕೊಟ್ಟೂರು ದೇವಾಲಯದಲ್ಲಿ ಇದೀಗ ವೈಷಾಕ ಮಹೋತ್ಸವ ನಡೆಯುತ್ತಿದ್ದು, ಈ ವರ್ಷದ ಮೇ.30 ರಿಂದ ಜೂನ್ 24 ರವರೆಗೆ ಮಾತ್ರ ದೇವಾಲಯ ಭಕ್ತರ ದರ್ಶನಕ್ಕೆ ಸಿಗಲಿದೆ. ಕೊಟ್ಟಿಯೂರಿನ ಈ ದೇವಾಲಯ ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ಟ್ರೆಂಡ್ ಕ್ರಿಯೇಟ್ ಮಾಡಿದ್ದು, ಬಹುತೇಕ ಕನ್ನಡಗರೇ ಈ ದೇವಾಲಯಕ್ಕೆ ಅತಿ ಹೆಚ್ಚು ಭೇಟಿ ನೀಡುತ್ತಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ : ಧಗ ಧಗನೇ ಹೊತ್ತಿ ಉರಿದ ಖಾಸಗಿ ಬಸ್ – 17 ಪ್ರಯಾಣಿಕರು ಬಚಾವ್

ಕನ್ನಡಿಗ ಭಕ್ತರ ಮೇಲೆ ಕೊಟ್ಟಿಯೂರು ದೇವಸ್ಥಾನದ ಸಿಬ್ಬಂದಿಗಳು ದರ್ಪ
ಶನಿವಾರ ಹಾಗೂ ಭಾನುವಾರ ವೀಕೆಂಡ್ ಹಿನ್ನೆಲೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಕೊಟ್ಟಿಯೂರಿಗೆ ಹರಿದುಬಂದಿದ್ದು,ಭಕ್ತರು ದರ್ಶನದ ಅವ್ಯವಸ್ಥೆಗೆ ಹೈರಾಣಾಗಿದ್ದಾರೆ. ಇದೇ ವೇಳೆ ಕನ್ನಡಿಗ ಭಕ್ತರ ಮೇಲೆ ಕೊಟ್ಟಿಯೂರು ದೇವಸ್ಥಾನದ ಸಿಬ್ಬಂದಿಗಳು ದರ್ಪ ತೋರಿದ್ದು, ಕ್ಯೂನಲ್ಲಿ ನಿಂತಿದ್ದ ಮಹಿಳೆಯರ ಮೇಲೆ ಕಾಲಿನಿಂದ ನೀರು ಎರಚಿ,ಏಕಾಏಕಿ ತಳ್ಳಿ ಅವರನ್ನ ಹೀನಾಯವಾಗಿ ನಡೆಸಿಕೊಂಡಿದ್ದಾರೆ. ಈ ಜೊತೆಗೆ ದೇವಾಲಯದ ವಿಶೇಷ ದರ್ಶನಕ್ಕೆ 1 ಸಾವಿರ ರೂಪಾಯಿ ಟಿಕೆಟ್ ನೀಡಿದ್ದು,ಅದಕ್ಕೂ ಸಾಮಾನ್ಯ ಕ್ಯೂನಲ್ಲಿ ಬಿಟ್ಟು ಭಕ್ತರ ಆಕ್ರೋಷಕ್ಕೆ ಕಾರಣರಾಗಿದ್ದಾರೆ. ಕೊಟ್ಟಿಯೂರು ದೇವಾಲಯಕ್ಕೆ ಬರಬೇಡಿ ಎಂದು ಕನ್ನಡಿಗರು ಕೈಮುಗಿಯುತ್ತಿದ್ದಾರೆ.

ವ್ಯವಸ್ಥೆ ಕಲ್ಪಿಸದೇ,ಅಗೌರವ ತೋರಿ, ದರ್ಪ ಮೆರೆದಿರೋ ದೇವಾಲಯದ ಆಡಳಿತ
ಕೇರಳಂ ರಾಜ್ಯದ ಭಕ್ತರಿಗೂ ಹೆಚ್ಚಾಗಿ ಕರ್ನಾಟಕದ ಭಕ್ತರು ಕೊಟ್ಟಿಯೂರು ದೇವಾಲಯಕ್ಕೆ ಆಗಮಿಸುತ್ತಿದ್ದು, ಸರಿಯಾದ ವ್ಯವಸ್ಥೆ ಕಲ್ಪಿಸದೇ,ಅಗೌರವ ತೋರಿ, ದರ್ಪ ಮೆರೆದಿರೋದು ಕೊಟ್ಟಿಯೂರು ದೇವಾಲಯದ ಆಡಳಿತ ಮಂಡಳಿ ವಿರುದ್ದ ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನಾದರೂ ಕೊಟ್ಟಿಯೂರು ಆಡಳಿತ ಮಂಡಳಿ ಭಕ್ತರ ಭಾವನೆಗಳಿಗೆ ದಕ್ಕೆಯಾಗದಂತೆ ನಡೆದುಕೊಳ್ತಾರಾ ಕಾದುನೋಡ್ಬೇಕಿದೆ.

ಇದನ್ನು ನೋಡಿ : DJಗಾಗಿ ರಸ್ತೆ ತಡೆ ಮಾಡಿದ್ದವರಿಗೆ ಶಾಕ್ – 12 ಸಾವಿರ ದಂಡ, ಕಟ್ಟದಿದ್ರೆ 45 ದಿನ ಜೈಲು




