Gold Rate : ಹತ್ತು ಗ್ರಾಮ್ ಚಿನ್ನದ ಬೆಲೆ 2,250 ರೂ ಏರಿಕೆ; ಬೆಳ್ಳಿಯೂ ದುಬಾರಿ

ದೇಶದಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆಗಳು ಸತತ ಮೂರನೇ ದಿನವೂ ಏರಿಕೆ ಕಂಡಿವೆ. ಶುಕ್ರವಾರ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹225ರಷ್ಟು ಹೆಚ್ಚಳವಾಗಿದ್ದು, 24 ಕ್ಯಾರಟ್ ಚಿನ್ನದ ಬೆಲೆ ₹14,700 ಹಾಗೂ 22 ಕ್ಯಾರಟ್ ಚಿನ್ನದ ಬೆಲೆ ₹13,475ಕ್ಕೆ ತಲುಪಿದೆ. 18 ಕ್ಯಾರಟ್ ಚಿನ್ನದ ಬೆಲೆ ಕೂಡ ಮೊದಲ ಬಾರಿಗೆ ₹11,000 ಗಡಿ ದಾಟಿ ₹11,025ಕ್ಕೆ ಏರಿಕೆಯಾಗಿದೆ.
ದೇಶಾದ್ಯಂತ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,34,750 ಆಗಿದ್ದರೆ, 24 ಕ್ಯಾರಟ್ ಚಿನ್ನದ ಬೆಲೆ ₹1,47,000ಕ್ಕೆ ತಲುಪಿದೆ. ಬೆಳ್ಳಿ ಬೆಲೆಯೂ ಏರಿಕೆಯಾಗಿದ್ದು, ಪ್ರತಿ ಗ್ರಾಂ ₹250 ಹಾಗೂ 100 ಗ್ರಾಂಗೆ ₹25,000 ಆಗಿದೆ.

ಬೆಂಗಳೂರಿನ ದರ
- 24 ಕ್ಯಾರಟ್ ಚಿನ್ನ (1 ಗ್ರಾಂ): ₹14,700
- 22 ಕ್ಯಾರಟ್ ಚಿನ್ನ (1 ಗ್ರಾಂ): ₹13,475
- ಬೆಳ್ಳಿ (1 ಗ್ರಾಂ): ₹250
ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)
- ಬೆಂಗಳೂರು – ₹13,475
- ಚೆನ್ನೈ – ₹13,700
- ಮುಂಬೈ – ₹13,475
- ದೆಹಲಿ – ₹13,490
- ಕೊಲ್ಕತ್ತಾ – ₹13,475
- ಕೇರಳ – ₹13,475
- ಅಹಮದಾಬಾದ್ – ₹13,480
- ಜೈಪುರ – ₹13,490
- ಲಖನೌ – ₹13,490
- ಭುವನೇಶ್ವರ – ₹13,475
ಇದನ್ನು ಓದಿ : ಜುಲೈ 2ರಂದು ಚಿನ್ನದ ಬೆಲೆ ಏರಿಕೆ – ಬೆಳ್ಳಿ ದರವೂ ಹೆಚ್ಚಳ..!!

ಪ್ರಮುಖ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಂ)
- ಬೆಂಗಳೂರು – ₹250
- ಚೆನ್ನೈ – ₹260
- ಮುಂಬೈ – ₹250
- ದೆಹಲಿ – ₹250
- ಕೊಲ್ಕತ್ತಾ – ₹250
- ಕೇರಳ – ₹260
- ಅಹಮದಾಬಾದ್ – ₹250
- ಜೈಪುರ – ₹250
- ಲಖನೌ – ₹250
- ಭುವನೇಶ್ವರ – ₹260
- ಪುಣೆ – ₹250

ವಿದೇಶಗಳಲ್ಲಿ 24 ಕ್ಯಾರಟ್ Gold Rate (1 ಗ್ರಾಂ)
- ಮಲೇಷ್ಯಾ – 561 ರಿಂಗಿಟ್ (ಸುಮಾರು ₹13,129)
- ದುಬೈ – 494.75 ದಿರ್ಹಮ್ (ಸುಮಾರು ₹12,827)
- ಅಮೆರಿಕ – 136 ಡಾಲರ್ (ಸುಮಾರು ₹12,958)
- ಸಿಂಗಾಪುರ – 185 ಸಿಂಗಾಪುರ್ ಡಾಲರ್ (ಸುಮಾರು ₹13,667)
- ಕತಾರ್ – 498.50 ಕತಾರಿ ರಿಯಾಲ್ (ಸುಮಾರು ₹13,026)
- ಸೌದಿ ಅರೇಬಿಯಾ – 513 ಸೌದಿ ರಿಯಾಲ್ (ಸುಮಾರು ₹13,015)
- ಓಮನ್ – 52.90 ಒಮಾನಿ ರಿಯಾಲ್ (ಸುಮಾರು ₹13,090)
- ಕುವೇತ್ – 41.40 ಕುವೇತಿ ದಿನಾರ್ (ಸುಮಾರು ₹12,806)

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ Gold Rate ನಲ್ಲಿ ಏರಿಕೆ ಕಂಡುಬಂದಿರುವುದು ದೇಶೀಯ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ. ಆದರೆ ಅಂತಿಮ ಖರೀದಿ ವೇಳೆ ಜಿಎಸ್ಟಿ, ಮೇಕಿಂಗ್ ಚಾರ್ಜ್ ಹಾಗೂ ಇತರೆ ಶುಲ್ಕಗಳು ಹೆಚ್ಚುವರಿಯಾಗಿ ಅನ್ವಯವಾಗುವುದರಿಂದ ಅಂಗಡಿಗಳಲ್ಲಿ ದರದಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬರಬಹುದು.
ಇದನ್ನು ನೋಡಿ : ವಾಸದ ಮನೆಗಳನ್ನೇ ಧ್ವಂಸ ಮಾಡಿದ ಕಿರಾತಕರು ಹಳೆ ದ್ವೇಷಕ್ಕೆ ಜೆಸಿಬಿಯಿಂದ ಮೂರು ಮನೆಗಳ ಧ್ವಂಸ





