Gold Rate ಮತ್ತಷ್ಟು ಏರಿಕೆ – ಗ್ರಾಮ್ಗೆ 50 ರೂ ಹೆಚ್ಚಳ

ಚಿನ್ನದ ಬೆಲೆಯಲ್ಲಿ ಏರಿಕೆ ಮುಂದುವರಿದಿದ್ದು, ವಾರಾಂತ್ಯದಲ್ಲಿ ಪ್ರತಿ ಗ್ರಾಂಗೆ ₹205 ಏರಿಕೆಯಾಗಿದ್ದ Gold Rate ಸೋಮವಾರ ಮತ್ತೆ ₹50ರಷ್ಟು ಹೆಚ್ಚಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಸ್ಪಾಟ್ ಗೋಲ್ಡ್ ಹಾಗೂ ಸ್ಪಾಟ್ ಸಿಲ್ವರ್ ದರಗಳಲ್ಲಿ ಅಲ್ಪ ಏರಿಕೆ ಕಂಡುಬಂದಿದೆ.
ಆಗಸ್ಟ್ 17ರ ಪ್ರಕಾರ ಭಾರತದಲ್ಲಿ 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹15,566 ಇದ್ದರೆ, 22 ಕ್ಯಾರಟ್ ಚಿನ್ನದ ದರ ₹14,270 ಹಾಗೂ 18 ಕ್ಯಾರಟ್ ಚಿನ್ನದ ದರ ₹11,676 ಇದೆ. ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ ₹250ರಷ್ಟಿದೆ.
ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,42,700 ಇದ್ದು, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ ₹1,55,660 ಆಗಿದೆ. 100 ಗ್ರಾಂ ಬೆಳ್ಳಿಯ ಬೆಲೆ ₹25,000ರಷ್ಟಿದೆ.

ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ
- ಬೆಂಗಳೂರು: ₹14,270/ಗ್ರಾಂ
- ಚೆನ್ನೈ: ₹14,270/ಗ್ರಾಂ
- ಮುಂಬೈ: ₹14,270/ಗ್ರಾಂ
- ದೆಹಲಿ: ₹14,285/ಗ್ರಾಂ
- ಕೋಲ್ಕತಾ: ₹14,270/ಗ್ರಾಂ
- ಕೇರಳ: ₹14,270/ಗ್ರಾಂ
- ಅಹ್ಮದಾಬಾದ್: ₹14,275/ಗ್ರಾಂ
- ಜೈಪುರ: ₹14,285/ಗ್ರಾಂ
- ಲಕ್ನೋ: ₹14,285/ಗ್ರಾಂ
- ಭುವನೇಶ್ವರ್: ₹14,270/ಗ್ರಾಂ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ
ಸ್ಪಾಟ್ ಗೋಲ್ಡ್ ಪ್ರತಿ ಗ್ರಾಂಗೆ 141.18 ಡಾಲರ್, ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಸುಮಾರು ₹13,498ರಷ್ಟಿದೆ. ಸ್ಪಾಟ್ ಸಿಲ್ವರ್ ಪ್ರತಿ ಗ್ರಾಂಗೆ 2.106 ಡಾಲರ್, ಅಂದರೆ ಸುಮಾರು ₹201ರಷ್ಟಿದೆ.
ಇದನ್ನು ಓದಿ : ಚಿನ್ನದ ದರದಲ್ಲಿಂದು ಯಥಾಸ್ಥಿತಿ – ಬೆಲೆ ಇಲ್ಲಿದೆ

ವಿವಿಧ ದೇಶಗಳಲ್ಲಿ 24 ಕ್ಯಾರಟ್ Gold Rate
- ಭಾರತ: ₹15,566/ಗ್ರಾಂ
- ಮಲೇಷ್ಯಾ: ₹13,899/ಗ್ರಾಂ
- ದುಬೈ: ₹13,728/ಗ್ರಾಂ
- ಅಮೆರಿಕ: ₹13,764/ಗ್ರಾಂ
- ಸಿಂಗಾಪುರ: ₹14,330/ಗ್ರಾಂ
- ಕತಾರ್: ₹13,832/ಗ್ರಾಂ
- ಸೌದಿ ಅರೇಬಿಯಾ: ₹13,825/ಗ್ರಾಂ
- ಓಮನ್: ₹13,904/ಗ್ರಾಂ
- ಕುವೇತ್: ₹13,604/ಗ್ರಾಂ
ಪ್ರಮುಖ ನಗರಗಳಲ್ಲಿ ಬೆಳ್ಳಿ ದರ
ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತಾ, ಅಹ್ಮದಾಬಾದ್, ಜೈಪುರ, ಲಕ್ನೋ ಹಾಗೂ ಪುಣೆಯಲ್ಲಿ ಬೆಳ್ಳಿ ಪ್ರತಿ ಗ್ರಾಂಗೆ ₹250ರಷ್ಟಿದೆ. ಚೆನ್ನೈ, ಕೇರಳ ಹಾಗೂ ಭುವನೇಶ್ವರದಲ್ಲಿ ಪ್ರತಿ ಗ್ರಾಂಗೆ ₹255ರ ದರ ಇದೆ.

ಗಮನಿಸಿ: ಚಿನ್ನ ಮತ್ತು ಬೆಳ್ಳಿಯ ದರಗಳು ಮಾರುಕಟ್ಟೆ ಹಾಗೂ ಆಭರಣ ಮಳಿಗೆಗಳಿಗೆ ಅನುಗುಣವಾಗಿ ಬದಲಾಗಬಹುದು. ಇಲ್ಲಿ ನೀಡಿರುವ ದರಗಳ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜ್ ಸೇರಿದಂತೆ ಇತರ ಶುಲ್ಕಗಳು ಅನ್ವಯವಾಗಬಹುದು. ಖರೀದಿಸುವ ಮುನ್ನ ಸ್ಥಳೀಯ ಆಭರಣ ಮಳಿಗೆಯಲ್ಲಿ ಇಂದಿನ ನಿಖರ ದರವನ್ನು ಪರಿಶೀಲಿಸುವುದು ಸೂಕ್ತ.
ಇದನ್ನು ನೋಡಿ : ಅಧಿಕಾರ ಯಾರಿಗೂ ಶಾಶ್ವತವಲ್ಲ – ಎಂ.ಬಿ. ಪಾಟೀಲ್ ಗೆ ನಾಡಗೌಡ ಎಚ್ಚರಿಕೆ




